ಸಂವಿಧಾನಜಾಗೃತಿಜಾಥಾ: ರಕ್ತದಾನ ಶಿಬಿರ, ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳ ಆಯೋಜನೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ.-08ಸಂವಿಧಾನ ದಿನಾಚರಣೆ ಪ್ರಯುಕ್ತಚಾಮರಾಜನಗರತಾಲೂಕಿನಲ್ಲಿ ಆಯೋಜಿಸಿರುವ ಜಾಗೃತಿಜಾಥಾ ಹಿನ್ನೆಲೆಯಲ್ಲಿರಕ್ತದಾನ ಶಿಬಿರ, ಪುಸ್ತಕ ಜೋಳಿಗೆಯಂತಹ ವಿಶಿಷ್ಟ ಅರ್ಥಪೂರ್ಣ ಕಾರ್ಯಕ್ರಮಗಳು ಗಮನ ಸೆಳೆದಿವೆ.
ವೆಂಕಟಯ್ಯನಛತ್ರಗ್ರಾಮದಲ್ಲಿಆಗಮಿಸಿದ ಸಂವಿಧಾನಜಾಗೃತಿಜಾಥಾಗೆಗ್ರಾಮ ಪಂಚಾಯಿತಿಅಧ್ಯಕ್ಷೆಆರ್. ಲಾವಣ್ಯ, ಉಪಾಧ್ಯಕ್ಷಮಂಜುನಾಥ್, ಇತರೆ ಸದಸ್ಯರು, ಗಣ್ಯರು, ಪಂಚಾಯತ್‍ಅಭಿವೃದ್ದಿಅಧಿಕಾರಿರಾಜೇಂದ್ರ ಪ್ರಸಾದ್, ಪುಷ್ಪಾರ್ಚನೆ ನೆರವೇರಿಸುವ ಮೂಲಕ ಬರ ಮಾಡಿಕೊಂಡರು. ಕಳಶ ಹೊತ್ತ ಮಹಿಳೆಯರು, ಶಾಲಾ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಮುಖಂಡರುಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು. ಗ್ರಾಮದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಗ್ರಾಮ ಪಂಚಾಯಿತಿಅಧ್ಯಕ್ಷÀ ಲಾವಣ್ಯಅವರು ಮಾತನಾಡಿದರು. ವಿಚಾರವಾದಿ ಕೆ. ನಾಗರಾಜು, ನೋಡಲ್‍ಅಧಿಕಾರಿ ವೆಂಕಟೇಶ್, ಸಹ ಶಿಕ್ಷಕÀ ಮಲ್ಲೇಶ್ ಉಪಸ್ಥಿತರಿದ್ದರು.
ಬಿಸಲವಾಡಿಯಲ್ಲಿ ಸಂವಿಧಾನಜಾಗೃತಿ ಅಂಗವಾಗಿ ಗ್ರಾಮದ ಪ್ರಾಥಮಿಕಆರೋಗ್ಯಕೇಂದ್ರದಲ್ಲಿರಕ್ತದಾನ ಶಿಬಿರ ಆಯೋಜಿಸಿದ್ದು ವಿಶೇಷವಾಗಿತ್ತು. ಬಿಸಲವಾಡಿಯಲ್ಲಿಗ್ರಾಮ ಪಂಚಾಯಿತಿಅಧ್ಯಕ್ಷರಾದ ಜಿ. ರಮ್ಯ, ಉಪಾಧ್ಯಕ್ಷ ಬೇಬಿ ಈಶ್ವರ್ ಪುಷ್ಪಾರ್ಚನೆ ಮಾಡುವ ಮೂಲಕ ಅದ್ದೂರಿಯಾಗಿ ಸಂವಿಧಾನಜಾಗೃತಿಜಾಥಾವನ್ನು ಸ್ವಾಗತಿಸಿದರು. ಗ್ರಾಮದಲ್ಲಿ ನಡೆದ ಮೆರವಣಿಗೆ ವೇಳೆ ವೀರಗಾಸೆ, ಡೊಳ್ಳುಕುಣಿತ, ಶಾಲಾ ಮಕ್ಕಳ ಬ್ಯಾಂಡ್ ವಾದನ ಮೆರಗು ನೀಡಿದವು. ಗ್ರಾಮಸ್ಥರುಕೋಲಾಟದ ಮೂಲಕ ಉತ್ಸಾಹದಿಂದ ಪಾಲ್ಗೊಂಡರು. ಚಿಕ್ಕಮಕ್ಕಳು ಡಾ. ಬಿ.ಆರ್. ಅಂಬೇಡ್ಕರ್‍ಅವರ ವೇಷ ಭೂಷಣಧರಿಸಿ ಗಮನಸೆಳೆದರು.
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದಪ್ರಾಂಶುಪಾಲÀ ಪ್ರೊ. ದೇವರಾಜುಅವರುಡಾ. ಬಿ.ಆರ್. ಅಂಬೇಡ್ಕರ್‍ಅವರ ಸಂವಿಧಾನದಲ್ಲಿ ಸರ್ವರಿಗೂ ಸಮಾನತೆಇದೆ. ಜನರ ಸರ್ವಾಂಗೀಣಅಭಿವೃದ್ದಿಗೆ ಪೂರಕವಾದಎಲ್ಲವನ್ನೂ ಸಂವಿಧಾನ ಒಳಗೊಂಡಿದೆ. ಇದರ ಆಶಯಗಳನ್ನು ಅರಿತು ಪ್ರತಿಯೊಬ್ಬರೂ ಪ್ರಜ್ಞಾವಂತಿಕೆಯಿಂದ ನಡೆದುಕೊಳ್ಳಬೇಕು ಎಂದರು. ಸಮಾಜಕಲ್ಯಾಣಇಲಾಖೆಯ ಸಹಾಯಕ ನಿರ್ದೇಶಕಚಿಕ್ಕಬಸವಯ್ಯಅವರು ಸಂವಿಧಾನ ಪೀಠಿಕೆ ಬೋಧಿಸಿದರು.
ಕೋಡಿಉಗನೆಗ್ರಾಮದಲ್ಲಿಯೂ ವಿಶೇಷವಾಗಿ ಸಂವಿಧಾನಜಾಗೃತಿಜಾಥಾ ನಡೆಯಿತು. ಜನರು ಹುರುಪಿನಿಂದ ಭಾಗವಹಿಸಿದರು. ಅಟ್ಟುಗೂಳಿಪುರದಲ್ಲಿಯೂ ಸಂವಿಧಾನಜಾಗೃತಿಜಾಥಾಗೆ ಸಂಭ್ರಮದಿಂದ ಸ್ವಾಗತಿಸಲಾಯಿತು. ಸಿದ್ದಯ್ಯನಪುರದಲ್ಲಿಯೂ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.