ಸಂವಿಧಾನಕ್ಕೆ ಧಕ್ಕೆ ತರುತ್ತಿರುವ ಏಕೈಕ ಪಕ್ಷ ಬಿಜೆಪಿ; ಆರೋಪ

ನಾಯಕನಹಟ್ಟಿ.ಸೆ.೨೦; ಜಾತ್ಯತೀತ ದೇಶದಲ್ಲಿ ಬಿಜೆಪಿಯ ರೀತಿನೀತಿಗಳಿಂದ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಡಾ.ಯೋಗೇಶ್ ಬಾಬು ತಿಳಿಸಿದರು. ನಾಯಕನಹಟ್ಟಿ ಸಮೀಪದ ಬಿಜಿಕೆರೆ ಗ್ರಾಮದಲ್ಲಿ ಸುದ್ದಿಗೊಷ್ಠಿಯೊಂದಿಗೆ ಮಾತನಾಡಿದ ಅವರು ಬಿಜೆಪಿಯವರು ಕೇವಲ ಪ್ರಚಾರದ ಮೂಲಕ ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ.  ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರಸ್ ಆಡಳಿತ ಹಿಡಿಯುವುದರಲ್ಲಿ ಸಂಶಯವಿಲ್ಲವೆಂದು ತಿಳಿಸಿದರು.
 ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿಯೂ ಕಾಣುತ್ತಿತ್ತು, ಅದು ಮತ್ತೇ ಮರಕಳಿಸಲು ಜನರು ಜಾಗೃತರಾಗಬೇಕು. ದೇಶದಲ್ಲಿ ಇಂಧನ, ಆಹಾರ, ದಾನ್ಯ ಸೇರಿ ಎಲ್ಲಾ ಬೆಲೆಗಳು ಏರುತ್ತಿದ್ದು, ಜನರ ಜೀವನ ಮಟ್ಟ ಕುಸಿಯುತ್ತಿದ್ದೆ. ಯುಪಿಎ ರ‍್ಕಾರ ಮಾಡಿದ ಎಲ್ಲಾ ಜನಪರ ಕರ‍್ಯಕ್ರಮಗಳನ್ನು ಬಿಜೆಪಿ ನಿಲ್ಲಿಸಿದ್ದು ಕೋರೋನ ಹೆಸರಿನಲ್ಲಿ ಜನರನ್ನೇ ಸುಲಿಯುತ್ತಿದ್ದಾರೆ ಎಂದರು.
 ಈ ಬಾರಿ ಬಿಜೆಪಿ ಸೋಲುತ್ತೇವೆ ಎಂಬ ಭಯದಿಂದ ಚುನಾವಣೆ ಮುಂದೂಡುತ್ತಿದ್ದಾರೆ. ಸಂವಿಧಾನಕ್ಕೆ ಧಕ್ಕೆ ತರುತ್ತಿರುವ ಏಕೈಕ ಪಕ್ಷ ಎಂದರೆ ಅದು ಬಿಜೆಪಿ ಎಂದರು.Attachments area