
ಅಫಜಲಪುರ:ಜ.28: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನುಭಾವರ ಮತ್ತು ನಾಯಕರ ಸ್ಮರಣೆ ಮತ್ತು ಸಂವಿಧಾನಕ್ಕೆ ಗೌರವ ಕೊಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಹೇಳಿದರು.
ತಾಲೂಕಿನ ದಿಕ್ಸಂಗಾ ಸಂಗಮನಾಥ ತೋಗಾರಿಕೆ ರೈತ ಉತ್ಪಾದಕರ ಸಂಸ್ಥೆಯಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಸಂವಿಧಾನದ ಮಹತ್ವ ಎಲ್ಲರೂ ತಿಳಿದುಕೊಳ್ಳುವಂತಾಗಬೇಕು. ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ. ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತೃತ್ವದ ಪರಿಕಲ್ಪನೆ ಪ್ರಜೆಗಳೆಲ್ಲರೂ ಅಳವಡಿಸಿಕೊಂಡು ಹೋಗುವಂತಾಗಬೇಕು. ಶೋಷಿತ ಮತ್ತು ಇತರೆ ಸಮುದಾಯ ಬಡವರಿಗೆ ಸಂವಿಧಾನ ಬದ್ಧವಾಗಿ ಸೌಲತ್ತು ದೊರಕಿಸಿಕೊಡಬೇಕು. ದುಡಿಯುವ ಕೈಗಳಿಗೆ ಉದ್ಯೋಗ ದೊರಕುವಂತಾಗಬೇಕು. ಸಂವಿಧಾನಕ್ಕೆ ನಾವೆಲ್ಲರೂ ಗೌರವ ಸಲ್ಲಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಯುವ ಮುಖಂಡ ಅರವಿಂದ ಗುತ್ತೇದಾರ, ವೀರಯ್ಯ ಸ್ವಾಮಿ, ಸಂಸ್ಥೆಯ ಅಧ್ಯಕ್ಷ ಶಿವಪುತ್ರಪ್ಪ ಕರೂರ, ಮಲ್ಲಿನಾಥ ಪಾಟೀಲ, ಪ್ರಕಾಶ ಪಟ್ಟಣ, ಕಲ್ಯಾಣಿ ಬಿರಾದಾರ, ಈರಣ್ಣಾ ದಿಕ್ಸಂಗಾ, ಶಂಕರಲಿಂಗ ಮೇತ್ರೆ, ಬಿ.ವಾಯ್ ಪಾಟೀಲ, ಲತೀಫ ಪಟೇಲ, ಬಸವಂತರಾಯ ಗುಡೂರ, ಸಂಗಮನಾಥ ಹೂಗಾರ, ನಬೀಲಾಲ ಮಾಶಾಳಕರ ಸೇರಿದಂತೆ ಹಲವಾರು ಜನ ಮುಖಂಡರು ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು.