
ಲಿಂಗಸುಗೂರು,ಸೆ.೧೫-
ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಸರ್ವ ಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಿದ ಡಾ; ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನಕ್ಕೆ ನಾವು ಎಲ್ಲಾರೂ ಗೌರವ ಕೊಡಬೇಕು ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಇಂದು ಸಂವಿಧಾನದ ಪೀಠಿಕೆ ಓದು ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಾಕ್ ಸ್ವಾತಂತ್ರ್ಯ, ಸಮಾನತೆಯನ್ನು ನಾವು ಸಮಾಜದಲ್ಲಿ ಕಾಣಬೇಕು, ಸಂವಿಧಾನವೇ ಈ ದೇಶದ ದೊಡ್ಡ ಗ್ರಂಥವಾಗಿದೆ ಇದಕ್ಕೆ ನಾವು ಎಲ್ಲರೂ ತಲೆಬಾಗಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯಲಿ ಪ್ರತಿ ಯೊಬ್ಬ ನಾಗರಿಕರು ಸಂವಿಧಾನದವನ್ನು ಓದಬೇಕು.
ಸಂವಿಧಾನವು ಡಾ.ಅಂಬೇಡ್ಕರ್ ಅವರು ನಮಗೆ ನೀಡಿರುವ ಜ್ಞಾನ ದೀವಿಗೆ, ಸಮಾನತೆಯ ದೀವಿಗೆಯಾಗಿದೆ. ಹೀಗಾಗಿ ಸಂವಿಧಾನದ ಪೀಠಿಕೆ ಓದುವುದು ಮಹತ್ವವಾದ ಉದ್ದೇಶ ಹೊಂದಿದ್ದು, ಇದು ವಿದ್ಯಾರ್ಥಿಗಳು ತಮ್ಮ ರಾಷ್ಟ್ರ ನಿರ್ಮಿಸಿರುವ ಮೂಲಭೂತ ತತ್ವಗಳು, ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಸಂವಿಧಾನ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಂತಹ ಪರಿಕಲ್ಪನೆ ಒಳಗೊಂಡಿದೆ. ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ನೆನಪಿಸುವ ಮೂಲಕ ದೇಶಭಕ್ತಿಯ ಭಾವನೆ ಮತ್ತು ಒಬ್ಬರ ದೇಶಕ್ಕೆ ಬಾಂಧವ್ಯ ಬೆಳೆಸುತ್ತದೆ. ನಾಗರಿಕರಾಗಿ ಅವರ ಹಕ್ಕುಗಳು, ಜವಾಬ್ದಾರಿಗಳನ್ನು ಅರಿಯಲು ಸಹಕಾರಿಯಾಗಲಿದೆ. ರಾಷ್ಟ್ರದ ಏಕತೆ ಮತ್ತು ವೈವಿಧ್ಯತೆಯನ್ನು ಸಂವಿಧಾನದ ಪೀಠಿಕೆ ಒತ್ತಿ ಹೇಳುತ್ತದೆ.
ಸಂವಿಧಾನದ ಪೀಠಿಕೆಯಲ್ಲಿರುವ ಪ್ರತಿಯೊಂದು ಪದಗಳು, ವಾಕ್ಯ ಬಹಳಷ್ಟು ಮುಖ್ಯವಾಗಿದ್ದು, ಪ್ರತಿಯೊಂದಕ್ಕೂ ವಿಶೇಷ ಅರ್ಥವಿದೆ, ಇದರ ಮಹತ್ವವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯ ಆಯುಕ್ತ ಅವಿನಾಶ್ ಶಿಂಧೆ, ತಹಶಿಲ್ದಾರ ಶಂ ಶಾಲಂ, ಡಿವೈಎಸ್ಪಿ ಮಂಜುನಾಥ, ಇಒ ಅಮರೇಶ ಯಾದವ್, ಬಿಇಒ ಹೊಂಬಣ್ಣ ರಾಠೋಡ್, ಸಮಾಜ ಕಲ್ಯಾಣ ಅಧಿಕಾರಿ ಸುರೇಶ ಕುಮಾರ, ಎಸ್ ಟಿ ಅಧಿಕಾರಿ ರಾಘವೇಂದ್ರ ರಾವ್, ಸಿಪಿಐ ಸಂಜೀವ ಕುಮಾರ, ವಾರ್ಡಗಳಾದ ಶರಣಪ್ಪ ಕುಷ್ಟಗಿ, ಮಲ್ಟಪ್ಪ, ಕಾಸೀಂಸಾಬ್, ಮಲ್ಲಿಕಾರ್ಜುನಗೌಡ, ಅನುಸುಯಾ, ನಾಗರತ್ನ, ಸುಮಾಗಂಲಾ, ಮಲ್ಲಮ್ಮ, ರಾಮಕೃಷ್ಣ ಸೇರಿ ವಿವಿಯ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಶಾಲಾ- ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.