ಸಂವಿದಾನ ಎತ್ತಿ ಹಿಡಿಯುವ ಸರ್ಕಾರಕ್ಕೆ ಮತ ನೀಡಿ: ಡಾ. ಸಿಂಗ್ ಮನವಿ

ನವದೆಹಲಿ,ಮಾ.26- ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ಸರ್ಕಾರಕ್ಕೆ ಮತ ನೀಡಿ.ಬುದ್ಧಿವಂತಿಕೆಯಿಂದ ಮತ ಚಲಾಯಿಸುವಂತೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್‌ ಇಂದಿಲ್ಲಿ ಮನವಿ ಮಾಡಿದ್ದಾರೆ.

ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭೆಗೆ ಮೊದಲ ಹಂತದ ಚುಜಾವಣೆ ನಾಳೆ ನಡೆಯಲಿರುವ ಹಿನ್ನೆಲೆಯಲ್ಲಿ ವಿಡಿಯೋ ಸಂದೇಶದ ಮೂಲಕ ಜನರಿಗೆ ಮನವಿ ಮಾಡಿದ್ದಾರೆ.

1991ರಿಂದ 2019 ರ ತನಕ ಅಸ್ಸಾಂ ನಿಂದ ಡಾ.ಮನಮೋಹನ್ ಸಿಂಗ್ ಅವರು ರಾಜ್ಯಸಭೆಯ ಸದಸ್ಯರಾಗಿದ್ದರು‌.ಸದ್ಯ ಈ ಬಾರಿ ರಾಜಸ್ತಾನದಿಂದ ಆಯ್ಕೆಯಾಗಿದ್ದಾರೆ.

ಹಲವು ವರ್ಷಗಳಿಂದ ಅಸ್ಸಾಂ ನಾನು ಬಲ್ಲೆ, ನನಗೆ ಎರಡನೇ ಮನೆ ಇದ್ದಂತೆ ಮಾಜಿ ಮುಖಯಮಂತ್ರಿ ಹಿತೇಶ್ವರ್ ಸೈಕಿಯಾ ಮತ್ತು ತರುಣ್ ಗೊಗೈ ಅವರೊಂದಿಗೆ ಉತ್ತಮ ಸಂಬಂದ ಹೊಂದಿದ್ದೆ‌‌.ಈ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಅಸ್ಸಾಂ ಅಭಿವೃದ್ಧಿ ಗಾಗಿ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಐದು ವರ್ಷ ಹಣಕಾಸು ಸಚಿವರಾಗಿ ಹತ್ತು ವರ್ಷ ಪ್ರಧಾನಿಯಾಗಿ ತಾವು ಸಲ್ಲಿಸಿರುವ ಸೇವೆ ಮತ್ತು ತಮ್ಮ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯ ನೋಡಿದ್ದೀರಿ.. ಮತ್ತೊಮ್ಮೆ ಬುದ್ದಿವಂತಿಕೆಯಿಂದ ಜನರಿಗಾಗಿ ಕೆಲಸ ಮಾಡುವ ಸರ್ಕಾರಕ್ಕೆ ಮತ ಚಲಾಯಿಸುವ ಅವಕಾಶ ಬಂದಿದೆ. ಆ ಕೆಲಸವನ್ನು ಎಚ್ಚರಿಕೆಯಿಂದ ಮಾಡಿ ಎಂದಿದ್ದಾರೆ.

15 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದ ತರುಣ್ ಗೊಗೈಯ್ ಅವರು 2016 ರಲ್ಲಿ ಅಧಿಕಾರ ಕಳೆದುಕೊಂಡಿದ್ದರು.ಈಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿ ಎಂದು ಅವರು ಮನವಿ ಮಾಡಿದ್ದಾರೆ ‌

ಅದೇ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಜನರು ಎಚ್ಚರಿಕೆಯಿಂದ ಮತ ಚಲಾಯಿಸಿ, ಸಂವಿದಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡುವ ಪಕ್ಷಕ್ಕೆ ಬುದ್ದಿವಂತಿಕೆಯಿಂದ ಮತ ಚಲಾಯಿಸಿ ಎಂದು ಪರೋಕ್ಷ ವಾಗಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.