
ಸೈದಾಪುರ:ಆ.24:ಸಂವಾದ ಗೊತ್ತಿರದ ಬಗಗೆ ತಿಳಿದುಕೊಳ್ಳುವುದರ ಮೂಲಕ ನಮ್ಮನ್ನು ಜ್ಞಾವಂತರನ್ನಾಗಿ ಮಾಡುತ್ತದೆ ಎಂದು ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜು ಹಾಗೂ ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜು ಸಹಯೋಗದಲ್ಲಿ ಅಜೀಂ ಪ್ರೇಮಿ ಜೀ ಫೌಂಡೇಶನ ವತಿಯಿಂದ ಸಂವಿಧಾನ ಮೌಲ್ಯಗಳು ಕುರಿತು ಹಮ್ಮಿಕೊಂಡ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಚರ್ಚೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಕಾರ್ಯಕ್ರಮದ ಮಹತ್ವ ಹೆಚ್ಚಾಗುತ್ತದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಸುರೇಶಗೌಡ ಮಾತನಾಡಿ, ಸಂವಿಧಾನ ನಮಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸದೆ ಅವುಗಳಲ್ಲಿನ ಮೌಲ್ಯಗಳನ್ನು ಗೌರವಿಸಿ ನಾವು ಪ್ರಯತ್ನ ಮಾಡಿದರೆ ಉತ್ತಮ ಸಾಧನೆಯೊಂದಿಗೆ ಮಾದರಿ ವ್ಯಕ್ತಿಗಳು ನಾವಾಗುತ್ತೇವೆ ಎಂದು ಹೇಳಿದರು.
ಗಣಿತ ಸಂಪನ್ಮೂಲ ವ್ಯಕ್ತಿ ರಂಗನಾಥ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸಾಧಿಸುವ ಗುಣವಿರುತ್ತದೆ. ಅದಕ್ಕೆ ತಾಳ್ಮೆ ಸೇರಿದಂತೆ ಸತತ ಪ್ರಯತ್ನ ಅತಿ ಮುಖ್ಯವಾಗಿದೆ ಎಂದು ಹೇಳಿದರು. ಸಂವಿಧಾನ ಮೌಲ್ಯಗಳ ಬಗಗೆ ಚರ್ಚೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಉಪನ್ಯಾಸಕರಾದ ಸಾಬಯ್ಯ ರಾಯಪ್ಪನೋರ, ಹಣಮರೆಡ್ಡಿ ಮೋಟ್ನಳ್ಳಿ, ಶ್ವೇತಾ ರಾಘವೇಂದ್ರ ಪೂರಿ, ಆನಂದ ಪಾಟೀಲ ಕೊಂಡಾಪುರ, ವಾಣಿಜ್ಯ ವಿಭಾಗದ ಶ್ವೇತಾ, ಭೀಮರೆಡ್ಡಿ, ಹಣಮಂತ ಸೇರಿದಂತೆ ಇತರರಿದ್ದರು. ವಿದ್ಯಾರ್ಥಿನಿ ಮರಿಯಮ್ಮ ಪ್ರಾರ್ಥಾನಾಗೀತೆ ಹಾಡಿದಳು. ತಾರಾಮತಿ ನಿರೂಪಿಸಿ, ವಂದಿಸಿದಳು.