ಸಂವಾದ, ಚರ್ಚೆ ಉತ್ತಮ ಆಡಳಿತದ ಆತ್ಮ: ಜಗದೀಪ್ ಧನಕರ್

ಗುವಹಟಿ,ಸೆ.22- ಸಂವಾದ ಮತ್ತು ಚರ್ಚೆಗಳು ಉತ್ತಮ ಆಡಳಿತದ ಆತ್ಮವಾಗಿದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದಾರೆ.

ಸಾಮಾಜಿಕ ಸಾಮರಸ್ಯಕ್ಕಾಗಿ ಮುಕ್ತ ವಿಚಾರಗಳ ಬಗ್ಗೆ ಚರ್ಚೆ ಆಗಬೇಕುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಗುವಾಹಟಿಯಲ್ಲಿ ನಡೆದ ಲೋಕ ಮಂಥನ ಕಾರ್ಯಕ್ರಮದ ಮೂರನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಅಸಹಿಷ್ಣುತೆ ಹೆಚ್ಚಾಗಿ ಕಂಡುಬರುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮಾತುಕತೆಗೆ ಒಳಪಡುವುದಿಲ್ಲ ಎಂದಿದ್ದಾರೆ.

ತಳಹಂತದಲ್ಲಿರುವ ಮಂದಿಯ ಅಭಿಪ್ರಾಯ ಆಲಿಸುವ ಮತ್ತು ಅದನ್ನು ರಕ್ಷಿಸುವ ಹೆಚ್ಚಿನ ಜವಾಬ್ದಾರಿ ನಾಗರಿಕ ಸಮಾಜದ ಸದಸ್ಯರ ಮೇಲಿದೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಸಾರುವ ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿದೆ.‌ ಅದರಲ್ಲಿಯೂ ಈಶಾನ್ಯ ರಾಜ್ಯಗಳನ್ನು ಹೈಲೈಟ್ ಮಾಡುತ್ತಿದೆ ಮತ್ತು ಭಾರತದ ಇತರ ಭಾಗಗಳಿಗೆ ನಮ್ಮ ಸಾಂಪ್ರದಾಯಿಕ ಜ್ಞಾನ ಮತ್ತು ಪರಂಪರೆಯನ್ನು ಹೊರತರುವ ಸಂವಾದ ಸುಗಮಗೊಳಿಸಲಿದೆ ಎಂದಿದ್ದಾರೆ.

ಈ ರೀತಿಯ ಚರ್ಚೆಗಳಿಂದ ಸಾರ್ವಜನಿಕ ವಿಚಾರ ಸಂಕಿರಣಕ್ಕೂ ಅವಕಾಶ ದೊರೆಯುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು

ಕಾರ್ಯಕ್ರಮದಲ್ಲಿ ಅಸ್ಸಾಂ ರಾಜ್ಯಪಾಲ ಪ್ರೊ.ಜಗದೀಶ್ ಮುಖಿ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಈ ಸಂದರ್ಭದಲ್ಲಿ ಮಾತನಾಡಿದರು.