ಸಂವಾದ ಕಾರ್ಯಕ್ರಮಕ್ಕೆ ಸಾರ್ವಜನಿಕರು ಭಾಗವಹಿಸಲು ಮನವಿ

ರಾಯಚೂರು.ನ.೨೫-ರಾಷ್ಟ್ರೀಯ ಮಾದಿಗ ಜಾಗೃತ ಸೇನೆ ವತಿಯಿಂದ ನಾಳೆ ಬೆಳಿಗ್ಗೆ ೧೧ ಗಂಟೆಗೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ನಿಮಿತ್ತೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಭಾಗವಹಿಸಬೇಕು ಎಂದು ರಾಷ್ಟ್ರೀಯ ಮಾದಿಗ ಜಾಗೃತ ಸೇನೆ ಅಧ್ಯಕ್ಷ ರಾಘವೇಂದ್ರ ಬೋರೆಡ್ಡಿ ಅವರು ಮನವಿ ಮಾಡಿದರು.
ಜಿಲ್ಲೆಯ ಎಲ್ಲಾ ಶಾಸಕರಿಗೆ ಸನ್ಮಾನ ಹಾಗೂ ಮಾದಿಗರ ಜನ್ಮಸಿದ್ಧ ಹಕ್ಕು ನ್ಯಾ.ಎ.ಜೆ ಸದಾಶಿವ ಆಯೋಗದ ವರದಿ ಜಾರಿಗೆ ಕುರಿತು ಸಂವಾದವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಕೋಡಿಹಳ್ಳಿ ಶಾಖಮಠ ಷಡಕ್ಷರಿಮುನಿ ಸ್ವಾಮಿ, ಹಿರಿಯ ಸಾಹಿತಿಗಳು ದಾನಪ್ಪ ನಿಲೋಗಲ್ ರಾಯಚೂರು, ದಲಿತ ಸಂಘಟನೆ ಸಮತಿ ಸಂಸ್ಥಾಪಕ ಸದಸ್ಯ ಶ್ರೀಧರ್ ಕಲವೀರ್ ಬೆಂಗಳೂರು ಹಾಗೂ ಜಿಲ್ಲೆಯ ಎಲ್ಲಾ ಪಕ್ಷದ ಜಿಲ್ಲಾ ಅಧ್ಯಕ್ಷರು ಆಗಮಿಸಲಿದ್ದು, ಸಮಾಜದ ಮುಖಂಡರು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಭಾಗವಹಿಸಬೇಕು ಎಂದು ಅವರು ಈ ಮೂಲಕ ಮನವಿ ಮಾಡಿದರು.