ಸಂಯಮದಿಂದ ಯಶಸ್ಸು ಸಾಧಿಸಲು ಸಾಧ್ಯ

ನರೇಗಲ್ಲ,ಟಿ.22:-ಮನುಷ್ಯ ತನ್ನ ಜೀವನದಲ್ಲಿ ಸಂಯಮದಿಂದ ಇದ್ದರೆ ಎಲ್ಲವನ್ನೂ ಪಡೆಯಲು ಸಾಧ್ಯ. ಈ ಸಂಯಮದೊಂದಿಗೆ ಸಮಯವೂ ಕೂಡಿ ಬಂದರೆ ಆ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜವು ಈ ಗುಣಗಳನ್ನು ತನ್ನಲ್ಲಿ ಅಳವಡಿಸಿಕೊಂಡಿರುವುದರಿಂದಲೆ ಇತರೆ ಎಲ್ಲ ಸಮಾಜಗಳೊಂದಿಗೆ ಅತ್ಯಂತ ಅನ್ಯೋನ್ಯತೆಯಿಂದ ಮುನ್ನಡೆಯುತ್ತಿದೆ ಎಂದು ಹರಿಹರ ಪೀಠದ ಪಂಚಮಸಾಲಿ ಜಗದ್ಗುರು ವಚನಾನಂದ ಮಹಾಸ್ವಾಮಿಗಳವರು ತಿಳಿಸಿದರು.
ಪಟ್ಟಣದ ಬಯಲು ಬಸವೇಶ್ವರ ದೇವಸ್ಥಾನದ ಬಯಲಿನಲ್ಲಿ ನರೇಗಲ್ಲದ ಪಂಚಮಸಾಲಿ ಸಮಾಜದವರು ಆಯೋಜಿಸಿದ್ದ ರೋಣ ಮತ್ತು ಗಜೇಂದ್ರಗಡ ತಾಲೂಕುಗಳ ತಾಲೂಕಾ ಮಟ್ಟದ ವೀರರಾಣಿ ಕಿತ್ತೂರು ಚನ್ನಮ್ಮಾಜಿಯವರ 244ನೆ ಜಯಂತ್ಯೋತ್ಸವ ಮತ್ತು 199ನೆ ವಿಜಯೋತ್ಸವ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಆಶೀರ್ವನ ನೀಡಿದರು.
ಪಂಚಮಸಾಲಿ ಸಮಾಜದಲ್ಲಿನ ಮಕ್ಕಳು ಅತ್ಯಂತ ಪ್ರತಿಭಾವಂತ ಮಕ್ಕಳಾಗಿದ್ದಾರೆ. ಆದರೆ ಮೀಸಲಾತಿಯ ಹಿನ್ನೆಡೆಯಿಂದ ಅವರಿಗೆ ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಸಿಗಬೇಕಾದ ಸ್ಥಾನಮಾನಗಳು ಸಿಗುತ್ತಿಲ್ಲ. ಇದಕ್ಕಾಗಿಯೇ ನಾವು ಕೇಂದ್ರದಲ್ಲಿ ಒಬಿಸಿ ಮೀಸಲಾತಿ ಮತ್ತು ಕರ್ನಾಟಕದಲ್ಲಿ 2ಎ ಮೀಸಲಾತಿಗಾಗಿ ಹೋರಾಟ ನಡೆಸಿದ್ದೇವೆ. ಇದು ಇನ್ನು ಎರಡು ತಿಂಗಳಲ್ಲಿ ಸಾಕಾರಗೊಳ್ಳುವ ಭರವಸೆ ನಮಗಿದೆ ಎಂದು ಜಗದ್ಗುರುಗಳು ಹೇಳಿದರು.
ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆಯವರು ಈಗಾಗಲೆ ರಾಜ್ಯದ 23 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಧ್ಯಯನ ನಡೆಸಿದ್ದು ಮುಂದಿನ ತಿಂಗಳಿನಲ್ಲಿ ಅವರು ತಮ್ಮ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದ್ದಾರೆ. ಈ ವರದಿಯನ್ನು ಆಧರಿಸಿ ಈಗ ಅಧಿಕಾರದಲ್ಲಿರುವ ಬಸವರಾಜ ಬೊಮ್ಮಾಯಿಯವರ ಸರಕಾರ ಪಂಚಮಸಾಲಿ ಸಮಾಜಕ್ಕೆ ಖಂಡಿತವಾಗಿಯೂ 2ಎ ಮೀಸಲಾತಿಯನ್ನು ಕೊಟ್ಟೇ ಕೊಡುತ್ತದೆ ಎಂದು ಶ್ರೀಗಳು ನುಡಿದರು.
ಜನೇವರಿ 14 ಮತ್ತು 15ರಂದು ಹರಿರಹರದಲ್ಲಿ ನಡೆಯುವ ಹರಪುರ ಜಾತ್ರೆಯ ಹೊತ್ತಿಗೆ 2ಎ ಮೀಸಲಾತಿ ಪಡೆದುಕೊಂಡೇ ಜಾತ್ರೆ ಮಾಡುವುದಾಗಿ ತಿಳಿಸಿದರು.
ಸಮಾವೇಶವನ್ನು ರೋಣ ಶಾಸಕ ಕಳಕಪ್ಪ ಬಂಡಿ ಉದ್ಘಾಟಿಸಿದರು.
ಪಂಚಮಸಾಲಿ ಸಮಾಜ ಅತಿ ದೊಡ್ಡ ಸಮಾಜವಾಗಿದ್ದು ಇದು ಇತರೆ ಎಲ್ಲ ಸಮಾಜದವರನ್ನೂ ತನ್ನೊಂದಿಗೆ ಕೊಂಡೊಯ್ಯುತ್ತಿದೆ. ಈಗಲೂ ಅಲ್ಲಲ್ಲಿ ಈ ಸಮಾಜದಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿದ್ದು ಇದು