ವಾಡಿ: ಏ. 16: ಸುಕ್ಷೇತ್ರÀ ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಭವ್ಯ ರಥೋತ್ಸವಕ್ಕೆ ಹಾವೇರಿ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು, ಕೂಡಲ ಮಠದ ಗುರುನಂಜೇಶ್ವರ ಮಹಾಸ್ವಾಮಿಗಳು, ಚಿತ್ತಾಪೂರ ಕಂಬಳೇಶ್ವರ ಮಠದ ಸೋಮಶೆಖರ ಶಿವಾಚಾರ್ಯರು, ರಾವೂರ ಮಠದ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು ಪೂಜೆ ಸಲ್ಲಿಸಿದ ನಂತರ ಅಪಾರ ಭಕ್ತರ ಜಯಘೋಷಗಳೊಂದಿಗೆ ಅತ್ಯಂತ ಸಂಭ್ರಮ ಸಡಗರದಿಂದ ಶುಕ್ರವಾರ ಸಾಯಂಕಾಲ ರಥೋತ್ಸವ ಜರುಗಿತ್ತು.
ಶ್ರೀಮಠದ ಆವರಣದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಭಕ್ತರು ಬೆಳಗ್ಗೆಯಿಂದಲೇ ಶ್ರೀ ಮಠಕ್ಕೆ ಭೇಟಿ ನೀಡಿ ಲಿಂ. ಸಿದ್ದಲಿಂಗ ಮಹಾಸ್ವಾಮಿಗಳ ಕೃತಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಶ್ರೀಸಿದ್ದಲಿಂಗ ಮಹಾಸ್ವಾಮಿಗಳ ಆಶಿರ್ವಾದ ಪಡೆದರು.
ರಥೋತ್ಸವಕ್ಕೂ ಮುಂಚೆ, ನಂದಿಕೋಲ್ ಮೆರವಣೆಗೆ, ಪುರವಂತರಿಂದ ಹಾಗೂ ವಿವಿಧ ಕಲಾತಂಡಾಗಳಿಂದ ಕೋಲಾಟ, ಹಲಗಿಬಾಜಿ ಪ್ರದರ್ಶನ ನಡೆದವು. ಜಾತ್ರೆ ನೋಡಲು ಅಪಾರ ಸಂಖ್ಯೆಯಲ್ಲಿ ಜನಸ್ತೋಮ ಪಾಲುಗೊಂಡಿತ್ತು. ಭಕ್ತರು ರಥೋತ್ಸವಕ್ಕೆ ಉತ್ತುತ್ತಿ-ಬಾಳೆಹಣ್ಣು ಎಸೆಯುವುದರ ಮೂಲಕ ಸಿದ್ದಲಿಂಗನ ಭಕ್ತಿಗೆ ಪಾತ್ರರಾದರು.
ಗ್ರಾಮದ ಮುಖಂಡರಾದ ಗುಂಡಣ್ಣ ಬಾಳಿ, ಶಿವಲಿಂಗಪ್ಪ ವಾಡೇದ, ಶ್ರೀನನಿವಾಸ ಸಗರ, ಅಬ್ದುಲ ಅಜೀಜ ಸೇಠ, ತಿಪ್ಪಣ್ಣ ವಗ್ಗರ, ಗುರುನಾಥ ಗುದ್ದಗಲ್, ಸಿದ್ದಲಿಂಗ ಬಾಳಿ, ಶರಣು ಜ್ಯೋತಿ, ಜಗದೀಶ ಪೂಜಾರಿ, ಸೇರಿದಂತೆ ಅನೇಕರು ವಾಡಿ ಪೋಲಿಸ್ ಠಾಣೆ ವತಿಯಿಂದ ಸೂಕ್ತ ಬಂದೋಬಸ್ತ ಏರ್ಪಡಿಸಲಾಗಿತು.