ಸಂಭ್ರಮ ಸಡಗರದಿಂದ ಕ್ರಿಸ್‌ಮಸ್ ಆಚರಣೆ

ಕೋಲಾರ,ಡಿ.೨೬: ನಗರದಲ್ಲಿ ಪ್ರತಿವರ್ಷದಂತೆ ಈ ವರ್ಷವು ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತ ಭಾಂದವರು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ ಈ ವರ್ಷ ಕೊರೋನಾ ಸೊಂಕಿನ ನಡುವೆಯೂ ಎಚ್ಚರಿಕೆಯ ಕ್ರಮಗಳನ್ನು ಪಾಲಿಸುವ ಮೂಲಕ ಕ್ರಿಸ್‌ಮಸ್ ಆಚರಣೆ ಮತ್ತು ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ನಗರದ ಸೆಂಟ್‌ಜೋಸೇಪ್ ಮತ್ತು ಮೇರಿಯಮ್ಮ ಎರಡು ಚರ್ಚಗಳನ್ನುವಿವಿಧ ಬಣ್ಣಗಳ ವಿದ್ಯುತ್ ದೀಪಗಳಿಂದ ಆಲಂಕಾರ ಮಾಡಲಾಗಿತ್ತು.ಯೇಸು ಪ್ರಭು ಕುರಿಯ ದೊಡ್ಡಿಯಲ್ಲಿ ಜನಿಸಿದ ಹಲವು ಚಿತ್ರಗಳನ್ನು ಎರಡೂ ಚರ್ಚಗಳಲ್ಲಿ ಬೊಂಬೆಗಳ ಮೂಲಕ ದೃಶ್ಯವಳಿಗಳನ್ನು ಬಿಂಬಿಸಲಾಗಿತ್ತು, ಕುರಿಗಳು, ಹಸಿರು ಹುಲ್ಲುಗಾವಲು, ಮುಂತಾದವುಗಳ ಮೂಲಕ ಗೋದಲಿಯನ್ನು ಸ್ಥಾಪಿಸಲಾಗಿತ್ತು.
ಕ್ರಿಸ್‌ಮಸ್ ಹಿಂದಿನ ದಿನ ಕ್ರಿಸ್‌ಮಸ್ ಈವ್ ಹಬ್ಬವನ್ನು ಆಚರಿಸಲಾಯಿತು. ಚರ್ಚ್ ಕಟ್ಟಡವನ್ನು ಮತ್ತು ಅವರಣವನ್ನು ಸ್ವಚ್ಚಗೊಳಿಸಿ ಸಿಂಗರಿಸಲಾಗಿತ್ತು. ನಗರದ ರಂಗಮಂದಿರದ ಮುಂಭಾಗದ ಚರ್ಚನ ಉದ್ಯಾನವನವು ಬಣ್ಣ ಬಣ್ಣದ ಹೂವಿನ ಗಿಡಗಳು ಸಾರ್ವಜನಿಕರನ್ನು ಆಕರ್ಷಿಸುವಂತೆ ಇತ್ತು ಉಡುಗೊರೆಯನ್ನು ನೀಡುವ ಸಂತಾ ಕ್ಲಾಸ್,ಪುಟಾಣಿಗಳನ್ನು ರಂಜಿಸುವ ಸಂತಾ ನಿಕೋಲಾಸ್ ಪಾದ್ರಿಯ ಬೊಂಬೆಗಳು ಗಮನ ಸೆಳೆಯುವಂತೆ ಇದ್ದವು ಇದೇ ರೀತಿ ವೇಷವನ್ನು ತೊಟ್ಟು ಮಕ್ಕಳನ್ನು ರಂಚಿಸಲಾಗುತ್ತಿತ್ತು.
ಮನೆಗಳಿಗೆ ಬಣ್ಣಗಳನ್ನು ಬಳಿಸಿ ಕಟ್ಟಡವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು ಮನೆಯ ಮುಂದೆ ವಿವಿಧ ವಿನ್ಯಾಸದ ನಕ್ಷತ್ರಗಳನ್ನುತೊಗುಹಾಕಲಾಗಿತ್ತು ಕ್ರಿಸ್ ಹಬ್ಬದ ಶುಭಷಯದ ಕೆಲವು ಘೋಷವಾಕ್ಯಗಳನ್ನು ನಕ್ಷತ್ರಗಳ ಮೇಲೆ ಅಂಟಿಸಲಾಗಿತ್ತು. ಕ್ರಿಸ್‌ಮಸ್ ಗಿಡಗಳಿಂದ ಸಿಂಗರಿಸಲಾಗಿತ್ತು. ಮನೆಗಳಲ್ಲಿ ಯೇಸು ಪ್ರಭುವಿನ ಮೇಲೆ ರಚಿಸಿರುವ ಭಕ್ತಿ ಗೀತೆಗಳು ಮೊಳುಗುತ್ತಿರುವುದು ಕೇಳಿ ಬರುತ್ತಿತ್ತು. ಶ್ರದ್ದಭಕ್ತಿ ನಯಿಂದ ನಗರದ ಚರ್ಚಿನಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು ಧರ್ಮಗುರುಗಳ ಭೋಧನೆಯನ್ನು ಶ್ರದ್ದಾ ಭಕ್ತಿಯಿಂದ ಅಲಿಸಿದರು. ಮೇಣದ ಬತ್ತಿಗಳನ್ನು ಹಚ್ಚುವ ಮೂಲಕ ಲೋಕ ಕಲ್ಯಾಣಕ್ಕಾಗಿ ಯೇಸು ಪ್ರಭುವಿನಲ್ಲಿ ಹಲವು ಗೀತೆಗಳನ್ನು ಹಾಡುವ ಮೂಲಕ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಗರದ ವಿವಿಧ ಗಣ್ಯರು ಚರ್ಚಗೆ ಅಗಮಿಸಿ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಶುಭಷಯಗಳನ್ನು ಕೋರಿದರು. ಕ್ರಿಸ್ತ್ ಭಾಂದವರು ಪರಸ್ಪರ ಕ್ರಿಸ್ ಹಬ್ಬದ ಶುಬಾಶಯಗಳನ್ನು ಕೋರಿದರು. ಪರಸ್ಪರ ಉಡುಗೊರೆಗಳನ್ನು ವಿನಿಮಯಿಸಿ ಕೊಂಡರು. ಸ್ನೇಹಿತರನ್ನು ಬಂಧುಗಳನ್ನು ಮನೆಗೆ ಆಹ್ವಾನಿಸಿ ವಿವಿಧ ಬಗೆಯ ಕೇಕ್‌ಗಳನ್ನು ತಿಂಡಿಗಳನ್ನು ನೀಡುವ ಮೂಲಕ ಉಪಚರಿಸಿ ಸಂಭ್ರಮಿಸುವ ಮೂಲಕ ಸೌರ್ಹದತೆಗೆ ಮೆರಗು ತಂದರು. ಕೊರೋನಾ ಹಿನ್ನಲೆಯಲ್ಲಿ ರಾತ್ರಿವೇಳೆ ವಿಧಿಸಿದ್ದ ಕರ್ಫ್ಯೊವನ್ನು ತೆರವುಗೊಳಿಸಿದ್ದು ಕ್ರೆಸ್ತ ಭಾಂದವರು ಹಬ್ಬದ ಆಚರಣೆಗೆ ಇದ್ದ ಕೆಲವು ಆಡಚಣೆಗಳು ಮುಕ್ತವಾಗಿ ನಿರಾಳವಾಗಿ ಹಬ್ಬವನ್ನು ಆಚರಿಸುವಂತಾಯಿತು.