ಸಂಭ್ರಮ ದಿಂದ ನಡೆದ ಜೋಡಿ ರಥೋತ್ಸವ

ಕೊಟ್ಟೂರು ಮಾ 27: :ಪಟ್ಟಣದ ಕೋಟೆಯ ಭಾಗದ ಪೂರ್ವ ವೀರಭದ್ರೇಶ್ವರ ಹಾಗೂ ರೇಣುಕಾಚಾರ್ಯರ ಸ್ವಾಮಿಯ ಜೋಡಿ ರಥೋತ್ಸವ ಶುಕ್ರವಾರ
ಸಂಜೆ ಭಕ್ತರಸಡಗರ ಸಂಭ್ರಮದ ಮಧ್ಯ ನಡೆಯಿತು.
ಇದಕ್ಕೂ ಮೊದಲು ವೀರಭದ್ರೇಶ್ವರಸ್ವಾಮಿ ಹಾಗೂ ರೇಣುಕಚಾರ್ಯ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಸಕಲ ಮಂಗಲವಾದ್ಯಗಳೊಂದಿಗೆ ಭಕ್ತರು ಹೊತ್ತು ತಂದು ರಥದ ಮೂರು ಬಾರಿ ಬಾರಿ ಸುತ್ತಿ ಸ್ವಾಮಿಯು ರಥ ವೇರಿತು. ಸ್ವಾಮಿಯ ಪಟಾಕ್ಷೆಯ ಹರಾಜು ನಡೆದತಕ್ಷಣ ರಥಗಳು ಸಾಗಿದವು
ಜೋಡಿ ರಥೋತ್ಸವದಲ್ಲಿ ಆನೇಕ ಗಣ್ಯರು ಪಾಲ್ಗೊಂಡಿದ್ದರು.
ಜೋಡಿ ರಥೋತ್ಸವವು ಹಿರೇಮಠದ ಮುಂಭಾಗ ಸೇರಿ ಗಾಂಧಿವೃತ್ತದ ಮೂಲಕ ಕೋಟೆ ವೀರಭದ್ರಶ್ವರ ಸ್ವಾಮಿಯ ದೇವಸ್ಥಾನ ತಲುಪಿತು.