ಸಂಭ್ರಮದ ಹೋಳಿ ಹಬ್ಬ ಆಚರಣೆ

ಗಬ್ಬೂರು,ಮಾ.೨೩- ಅಸುರ ಶಕ್ತಿಗಳ ನಿರ್ನಾಮದ ಸಂಕೇತವಾಗಿ ಆಚರಿಸುವ ಹಬ್ಬವೇ ಯುಗಾದಿ ಹಬ್ಬದ ಹೋಳಿಯಾಗಿದ್ದು, ದೇವದುರ್ಗ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಯುವಕರು, ಯುವತಿಯರು, ಚಿಣ್ಣರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.
ಯುಗಾದಿ ಹಬ್ಬದ ನಿಮಿತ್ಯ ಬುಧವಾರ ರಾತ್ರಿ ದೇವದುರ್ಗದ ವಿವಿಧೆಡೆ ಕಾಮದಹಿಸಲಾಯಿತು,ಗುರುವಾರ ಬೆಳಿಗ್ಗೆಯಿಂದಲೇ ಯುವಕರು ಬಣ್ಣ ತೆಗೆದುಕೊಂಡು ಫೈಬರ್ ಹಲಿಗೆ ಬಾರಿಸುತ್ತಾ ಕೇಳುಗರ ಕಿವಿಗಚ್ಚುವಂತೆ ಮಾಡಿದರೆ ಬಾಯಿ ಬಡಿದುಕೊಳ್ಳುವುದಂತೂ ನೋಡುತ್ತಿದ್ದಂತೆ ನಗೆಯ ಬುಗ್ಗೆ ಹರಿಸುತ್ತಿತ್ತು.
ಕೆಲವೆಡೆ ಚಿಣ್ಣರ ಶವಯಾತ್ರೆಯೂ ಜನರ ಗಮನಸೆಳೆಯಿತು.ದೇವದುರ್ಗದ ದರ್ಬಾರ್ ಓಣಿ, ಹಂಚಿನಾಳ, ಶಾವಂತಗೇರಾ, ಹೀರೆರಾಯಕುಂಪಿ, ಖಾನಾಪೂರ, ಗೂಗಲ್, ಹೀರೆಬೂದುರು, ಹೇಮನಾಳ, ಕೂಡ್ಲಿಗಿ,ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಯುಗಾದಿ ಹಬ್ಬದ ಕರೀ ಜನರು ಬಣ್ಣದ ಹೋಳಿಯಲ್ಲಿ ಮಿಂದೆದ್ದರು.