
ಕೊಟ್ಟೂರು ಮಾ 28: ಪ್ರತಿ ಬಡಾವಣೆಯ ಬೀದಿಗಳಲ್ಲಿ ಚೆಲ್ಲಾಡಿದ್ದ ಬಣ್ಣ, ಜನರ ಮುಖ ಹಾಗೂ ಮೈಯೆಲ್ಲವೂ ಬಣ್ಣದಲ್ಲಿ ಮಿಂದಿದ್ದ ಚಿತ್ರಣವು ತಾಲೂಕಿನಾದ್ಯಂತ ಹೋಳಿ ಹಬ್ಬದ ಸಂಭ್ರಮ, ಸಡಗರಕ್ಕೆ ಇಂದು ಸಾಕ್ಷಿಯಾದವು.
ಹುಣ್ಣಿಮೆಯ ದಿನವಾದ ಇಂದು ಬಾಲಕರು ಹಾಗೂ ಯುವಕರು ರಂಗಿನಾಟ ಆರಂಭಿಸಿದ್ದರು.
ನಗರದಾದ್ಯಂತ ಬೆಳಿಗ್ಗೆಯಿಂದಲೆ ಎಲ್ಲಿ ನೋಡಿದರೂ ಬಣ್ಣದೋಕುಳಿಯ ಚಿತ್ತಾರ ಎದ್ದು ಕಾಣುತ್ತಿತ್ತು. ಬಡಾವಣೆ ರಸ್ತೆ ಬದಿಗಳಲ್ಲಿ ಕೈಯಲ್ಲಿ ಬಣ್ಣ ಹಿಡಿದುಕೊಂಡು ನಿಂತಿದ್ದ ಬಾಲಕರ ಗುಂಪು ದಾರಿಯಲ್ಲಿ ಹಾಯ್ದು ಹೋಗುವವರಿಗೆ ಬಣ್ಣ ಎರಚಿ ಸಂಭ್ರಮ ಪಟ್ಟರು. ಪಟ್ಟಣದ ಉದ್ಯಮಿ ಅಂಗಡಿ ಪಂಪಾಪತಿ ತಮ್ಮಕುಟುಂಬದೊಂದಿಗೆ ಹೋಳಿಹಬ್ಬ ಆಚರಿಸಿದರು.