ಸಂಭ್ರಮದ ಹೋಳಿ ಆಚರಣೆ

ಶಿರಹಟ್ಟಿ,ಮಾ9: ಪಟ್ಟಣದಲ್ಲಿ ಸಡಗರ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಲಾಯಿತು.
ಮಂಗಳವಾರÀ ರಾತ್ರಿ 11 ಗಂಟೆಗೆ ಪಟ್ಟಣದ ವಾಲ್ಮೀಕಿ ವೃತ್ತದಿಂದ ಸಂಪ್ರದಾಯದಂತೆ ಹುಲ್ಲಿನಿಂದ ತಯಾರಿಸಿದ ಹುಲ್ಲುಗಾಮನಿಗೆ ಸಕಲ ವೇಷಭೂóಣದೊಂದಿಗೆ ಸಜ್ಜುಗೊಳಿಸಿ, ಬಂಡಿಯಲ್ಲಿ ಪ್ರತಿಷ್ಠಾಪಿಸಿ ಮೆರವಣಿಯನ್ನು ಆರಂಭಿಸಲಾಯಿತು. ಮೆರವಣಿಗೆ ವಿರುಪಾಕ್ಷಪ್ಪ ಕಪ್ಪತ್ತನವರ ರವರ ವೃತ್ತ, ಸೊರಟೂರ ನಾಕಾ, ಚೌವಡಿ, ನಂತರ ಗಾಂದೀ ವೃತ್ತ, ಮಾಬುಸುಬಾನಿ ದರ್ಗಾ ಮರಾಠ ಗಲ್ಲಿ, ಮ್ಯಾಗೇರಿ ಓಣಿ, ಕುರಬರ ಓಣಿ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ವಾಲ್ಮೀಕಿ ವೃತ್ತದ ಮೂಲಕ ಇಡೀ ರಾತ್ರಿ ಭವ್ಯವಾದ ಮೆರವಣಿಗೆ ನಡೆಸಿ ನಂತರ ಬುದವಾರ ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ವಾಲ್ಮೀಕಿ ವೃತ್ತದಲ್ಲಿ ಹುಲಗಾಮನನ್ನು ದಹಿಸಿ ಓಕಳಿಗೆ ಚಾಲನೆ ನೀಡಲಾಯಿತು.
ಅಬ್ಬರದ ಹಲಗೆಗೆಳ ನೀನಾದ: ಮಂಗಳವಾರ ಮಧ್ಯ ರಾತ್ರಿಯಿಂದ ಹಿಡಿದು ಬುದವಾರ 4 ಗಂಟೆಯವರೆಗೆ ಪಟ್ಟಣದಾದ್ಯಂತ ಯುವಕರೆಲ್ಲ ಹಲಗೆಗಳನ್ನು ಬಾರಿಸುವ ಸದ್ದು ಮುಗಿಲಿಗೆ ಮುಟ್ಟುವಂತಿತ್ತು. ಕೆಲವರು ಹಲಗೆಗಳ ನಿನಾದದಲ್ಲಿ ಮೈಮರೆತರು. ಇನ್ನು ಕೆಲವರು ಓಕಳಿ ಹಬ್ಬಕ್ಕಾಗಿಯೇ ಮೀಸಲಾದ ಹಾಡುಗಳನ್ನು ಹಾಡುತ್ತಸಂತೋಷ ಪಟ್ಟರು. ಇನ್ನು ಕೆಲವರು ವಿಭಿನ್ನವಾದ ವೇಷ ಭೂಷಣಗಳನ್ನು ತೊಟ್ಟಿದ್ದರು. ಅಣಕು ಶವ ಯಾತ್ರೆಯನ್ನು ನಡೆಸಿದರು. ಸ್ನೇಹಿತರು ಪರಸ್ಪರ ಬಣ್ಣ ಹಚ್ಚಿ ಹೋಳಿ ಹಬ್ಬವನ್ನು ಸೌಹಾರ್ಧವಾಗಿ ಆಚರಿಸಿದರು.