ಸಂಭ್ರಮದ ಹಬ್ಬ ಸ್ವಾತಂತ್ರ್ಯೋತ್ಸವ : ರಾಜೇಶ್ವರಿ ಎಸ್ ಪಿ

ಜೇವರ್ಗಿ:ಆ. 09 : ನಮ್ಮ ದೇಶವೆ ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ ಪ್ರಮುಖವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೆವೆ ಎಂದು ತಾಲೂಕ ದಂಡಾಧೀಕಾರಿ ಶ್ರೀಮತಿ ರಾಜೇಶ್ವರಿ ಎಸ್ ಪಿ ಅಭಿಮತಪಟ್ಟರು.

ಪಟ್ಟಣದ ತಹಸೀಲ್ ಕಚೇರಿಯ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ದಿ. ದೇವರಾಜ ಅರಸು ರವರ ಜಯಂತ್ಯೋತ್ಸವ ಕಾರ್ಯಕ್ರಮದ ಕುರಿತು ಪುರ್ವಭಾವಿ ಸಭೆ ನಡೆಸಲಾಯಿತು.

ನಮ್ಮ ಭಾರತ ದೇಶವೆ ಸಂಭ್ರಮದಿಂದ ಆಚರಿಸುವ ಹಬ್ಬಗಳ ಪೈಕಿ ಸ್ವಾತಂತ್ರ್ಯೋತ್ಸವ ಕೂಡ ಒಂದು. ಈ ಹಬ್ಬಕ್ಕೆ ತಾಲೂಕಿನ ಎಲ್ಲಾ ಅಧೀಕಾರುಗಳು ಹಾಗೂ ಶಾಲಾ ಕಾಲೇಜೀನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬಾಗವಿಸಬೇಕು. ಸಾಂಸ್ಕøತಿಕ ಕಾರ್ಯಕ್ರಮ ನಡಯಲಿದ್ದು ವಿದ್ಯಾರ್ಥೀಗಳು ತಮ್ಮ ಪ್ರತಿಭೇಗಳನ್ನ ಪ್ರದರ್ಶೀಸಬೇಕು. ಪ್ರತಿ ವರ್ಷದಂತೆ ಈ ವರ್ಷವು ಕೂಡ ಯತಾವತ್ತಾಗಿ ಕಾರ್ಯಕ್ರಮ ನಡೆಸಲಾಗುತ್ತದೆ. ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಅಗಷ್ಟ 15 ಕ್ಕೆ ಬೆಳಿಗ್ಗೆ 9 ಗಂಟೆಯ ಒಳಗೆ ಕ್ರೀಡಾಂಗಣಕ್ಕೆ ಆಗಮಿಸಬೇಕು.

ಅಗಷ್ಟ 20 ಕ್ಕೆ ಬೆಳಿಗ್ಗೆ 10 ಕ್ಕೆ ದಿ. ದೇವರಾಜ ಅರಸುರವರ ಜಯಂತಿಯನ್ನ ಆಚರಿಸಲಾಗುತ್ತದೆ. ತಾಲೂಕಿನ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಬಾಗವಹಿಸಬೇಕು. ಅ. 15 ರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕು. ಮಕ್ಕಳು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಬಾಗವಹಿಸಬೇಕು. ಸ್ವಾತಂತ್ರ್ಯ ದಿನಾಚರಣೆಯ ದಿನದಂದ ವಿಶೇಷ ಉಪನ್ಯಾಸವನ್ನು ನೀಡಲಾಗುವುದು ಆದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ಪ್ರಸನ್ ಕುಮಾರ ಮೊಗೇಕರ್, ಅಶೋಕ ನಾಯಕ, ಶ್ರೀಮತಿ ಶಕುಂತಲಾ, ಸಂಗಿತಾ ಹಿರೇಮಠ, ಮಹೇಶ ನಾಯಕ, ಪ್ರಭುಗೌಡ ದೇಸಾಯಿ, ಸಂಗಿತಾ ಹುಗಾರ, ಶೋಭಾ ಸಜ್ಜನ್, ಅಶೋಕ ಕುಮಾರ, ಸಿದ್ದಣ್ಣ, ಮಲ್ಲಪ್ಪ ಪೂಜಾರಿ, ಸಾಯಬಣ್ಣ ಕಲ್ಯಾಣಕರ್, ದಶರಥ, ಶಿವಣಗೌಡ ಕಲ್ಲಹಂಗರಗಾ, ಭೀಮರಯಾ ನಗನೂರ, ರವಿ ಕುಳಗೆರಿ, ಬಸವರಾಜ ಬಾಗೆವಾಡಿ ಸೆರಿದಂತೆ ಅನೆಕರು ಉಪಸ್ಥಿತರಿದ್ದರು.

ಸೊಮವಾರದ ಪುರ್ವಭಾವಿ ಸಭೆಯಲ್ಲಿ ಗೈರಾದ ಅಧೀಕಾರಿಗಳಿಗೆ ನೋಟಿಸ್ ನೀಡಲಾಗುವುದು. ಮುಂದಿನ ದಿನಗಳಲ್ಲಿ ಮತ್ತೆ ಅಧೀಕಾರಿಗಳು ಪುರ್ವಭಾವಿ ಸಭೆಯನ್ನು ಗೈರಾದರೆ ಕಠಿಣ ಕ್ರಮ ಕೈಗೊಳಲಾಗುತ್ತದೆ.