ಸಂಭ್ರಮದ ಹನುಮಾನ ಜಯಂತಿ ಆಚರಣೆ

ಔರಾದ :ಎ.6: ಪಟ್ಟಣದ ವಿವಿಧೆಡೆ ಬೆಳಿಗ್ಗೆ ಹನುಮ ಜಯಂತಿಯನ್ನು ಭಕ್ತರು ಶ್ರದ್ಧೆ ಮತ್ತು ಸಂಭ್ರಮದಿಂದ ಆಚರಿಸಿದರು.

ಪಟ್ಟಣದ ಗೀರಣೆ ಬಡಾವಣೆಯಲ್ಲಿ ಬೆಳಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಮುಂತಾದ ಧಾರ್ಮಿಕ ಕಾರ್ಯಗಳ ನಂತರ ಮಾತೆಯರಿಂದ ಬಾಲ ಹನುಮನ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ತೂಗಲಾಯಿತು. ಭಜನೆ, ನಾಮಸಂಕೀರ್ತನೆ ಮುಗಿದ ಬಳಿಕ ಮಹಾಪೂಜೆ ನೆರವೇರಿಸಲಾಯಿತು. ಭಕ್ತರಿಗೆ ಪ್ರಸಾದ, ಪಂಚಕಜ್ಜೆ, ಪಾನಕವನ್ನು ವಿತರಿಸಲಾಯಿತು.

ವಿವಿಧ ದೇವಸ್ಥಾನಗಳಲ್ಲೂ ಹನುಮ ಜಯಂತಿ : ಪಟ್ಟಣದ ಪುರಾತನ ಹನುಮಾನ ದೇವಸ್ಥಾನ, ಮಾರ್ಕೆಟ್ ಹನುಮಾನ, ಕೆಇಬಿ ಬಡಾವಣೆ, ನರಸಿಂಹ ದಾಲ ಮೀಲ ಹನುಮಾನ ಮಂದಿರ ಸೇರಿದಂತೆ ವಿವಿಧ ಬಡಾವಣೆಯ ಹನುಮಾನ ಮಂದಿರಗಳಲ್ಲಿ ಗುರುವಾರ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಹನುಮನ ತೊಟ್ಟಿಲು ತೂಗಿ ಧನ್ಯತೆ ಮೆರೆದರು. ಭಕ್ತರು ಸರದಿಯಲ್ಲಿ ನಿಂತು ದರ್ಶನ ಪಡೆದು ಪ್ರಸಾದ ಸ್ವಿ?ಕರಿಸಿದರು.