ಸಂಭ್ರಮದ ಸಲ್ಲಾಪುರಿ ದೇವಿ ಸಪ್ಪಲಮ್ಮ ದೇವಿ ವಾರ್ಷಿಕೋತ್ಸವ

ಆನೇಕಲ್.ಫೆ.೩:ಹೆಬ್ಬಗೋಡಿ ನಗರ ಸಭೆ ವ್ಯಾಪ್ತಿಯ ಸಂಪಿಗೆನಗರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ಸಲ್ಲಾಪುರಿಯಮ್ಮ ದೇವಿ ಮತ್ತು ಸಪ್ಪಲಮ್ಮ ದೇವಿ ದೇವಾಲಯದ ೨೪ ನೇ ವರ್ಷದ ವಾರ್ಷಿಕ ಮಹೋತ್ಸವ ಕರ್ನಾಟಕ ಪ್ರದೇಶ ಭೋವಿ ಕ್ಷೇಮಾಭ್ಯುದಯ ಸೇವಾ ಸಂಘದ ರಾಜ್ಯಾಧ್ಯಕ್ಷ ಡಾ.ಎಸ್, ಚಿನ್ನಸ್ವಾಮಿರವರ ಅಧ್ಯಕ್ಷತೆಯಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು.
ವಾರ್ಷಿಕ ಮಹೋತ್ಸವ ಅಂಗವಾಗಿ ಚಂಡಿಕ ಹೋಮ. ಸ್ವಾಮಿಗೆ ಹಾಗೂ ದೇವಾಲಯಕ್ಕೆ ವಿಶೇಷ ಅಲಂಕಾರ, ಕುಂಬಾಬಿಷೇಕ. ಅನ್ನದಾಸೋಹ, ಕೋಲಾಟ ಸೇರಿದಂತೆ ಹಲವು ವಿಶೇಷ ಪೂಜಾ ಕಾರ್ಯಕ್ರಮಗಳು ಗ್ರಾಮಸ್ಥರ ಸಮ್ಮುಖದಲ್ಲಿ ಶಾಸ್ತೋಸ್ತವಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ತುಳಸಿರಾಮ್. ಚೇತನ್ ಬಾಬು. ಶೇಖರ್, ಶ್ರೀನಿವಾಸ್. ಶಾಂತಿಪುರ ಗುರಪ್ಪ. ಚಂದ್ರ. ಲೋಕೇಶ್. ಮುನಿರಾಜು. ಅಶೋಕ್. ಶೇಖರ್. ಗಟ್ಟಹಳ್ಳಿ ರವಿ. ಗೋಪಾಲ್. ಸಿ.ಕೆ. ಪಾಳ್ಯ ಮೂರ್ತಿ. ಚಿನ್ನಣ್ಣ. ಲಷ್ಮಯ್ಯ. ರಾಜಾಜಿನಗರ ಸುದರ್ಶನ್. ಗಂಗರೆಡ್ಡಿ. ರಾಜು. ಮಹೇಶ್. ಮಂಜುನಾಥ್. ವೆಂಕಟೇಶ. ರಘು.ಆನಂದ್. ಗುರುರಾಜ್.ಅಖಿಲೇಶ್.ದಿಲೀಪ್ ಕೇಬಲ್ ಕೃಷ್ಣಪ್ಪ, ಶೇಖರ್, ಜಯಂತ್ ಮತ್ತು ಗ್ರಾಮಸ್ಥರು ಹಾಗೂ ಭಕ್ತರು ಬಾಗವಹಿಸಿದ್ದರು.