ಸಂಭ್ರಮದ ವೈಕುಂಠ ಏಕಾದಶಿ

ದಾವಣಗೆರೆ,ಡಿ.25: ಕೊರೊನಾದ ಆತಂಕದ ನಡುವೆಯು ನಗರದಲ್ಲಿಂದು ವೈಕುಂಠ ಏಕಾದಶಿ ಸಂಭ್ರಮದಿಂದ ನಡೆಯಿತು.
ನಗರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸೇರಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ನಡೆಯಿತು.
ನಗರದ ಎಂಸಿಸಿ ಬಿ ಬ್ಲಾಕ್ ಏಳನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಳದಲ್ಲಿ ವೈಕುಂಠ ಏಕಾದಶಿ ಮಹೋತ್ಸವ ನಡೆಯಿತು. ಭಕ್ತರ ಅಖಂಡ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.. ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿಂದು ಬೆಳಗ್ಗೆ 6.30 ಕ್ಕೆ ವೈಕುಂಠದ ಬಾಗಿಲು ತೆರೆಯಿತು. ಆ ನಂತರ ಪೂಜೆ ನಡೆಯಲಿದ್ದು, ನಿರಂತರ ರಾತ್ರಿ 10 ಗಂಟೆವರೆಗೂ ಸ್ವಾಮಿಯ ಅಖಂಡ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ವೆಂಕಟೇಶ್ವರ ಸ್ವಾಮಿಯ ದರ್ಶನದ ನಂತರ ಸ್ವರ್ಗದ ಬಾಗಿಲು ಮೂಲಕ ಹೊರ ಹೋಗಲು, ವ್ಯವಸ್ಥೆ ಮಾಡಲಾಗಿದೆ.