
ಕಾಳಗಿ.ಸೆ.5: ಕಲ್ಯಾಣ ಕರ್ನಾಟಕದ ಆರಾಧ್ಯ ದೈವ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವವು ಶ್ರಾವಣ ಮಾಸದ ನಡುವಿನ ಸೋಮವಾರ ಸಾಯಂಕಾಲ ಅಪಾರ ಭಕ್ತ ಜನಸಾಗರದ ಜೈಯಘೋಷಗಳ ಮಧ್ಯೆ ಸಡಗರ ಸಂಭ್ರಮದಿಂದ ಜರುಗಿತು.
ಪಲ್ಲಕ್ಕಿ ಉತ್ಸವದ ಅಂಗವಾಗಿ ಹಲವಾರು ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಶ್ರಾವಣ ಮಾಸದ ನಡುವಿನ ಸೋಮವಾರದಂದು ಬೆಳಿಗ್ಗೆ 3ಗಂಟೆಗೆ ರೇವಣಸಿದ್ದೇಶ್ವರ ಮೂರ್ತಿಗೆ ಕಾಕಡಾರತಿ, 4ಗಂಟೆಗೆ ರೇವಣಸಿದ್ದೇಶ್ವರ ತಪೆÇೀ ಗದ್ದುಗೆಗೆ ಸಹಸ್ರ ಬಿಲ್ವಾರ್ಚನೆ, ಮಹಾಪೂಜೆ, ಮಹಾಮಂಗಳಾರತಿ ಜರುಗಿದವು. 9 ಗಂಟೆಗೆ ಗ್ರಾಮದ ಚನ್ನಬಸಪ್ಪ ದೇವರಮನಿ ಅವರ ಮನೆಯಿಂದ ಉತ್ಸವ ಮೂರ್ತಿಯನ್ನು ಸುತ್ತಲಿನ ಗ್ರಾಮಗಳಾದ ಭೆಡಸೂರ, ರೇವಗ್ಗಿ, ರಟಕಲ, ಮುಕರಂಬಾ, ಕಂದಗೂಳ, ಮಾವಿನಸೂರ, ಗೊಣಗಿ ಗ್ರಾಮಗಳಲ್ಲಿ ಮೆರವಣಿಗೆ ಮಾಡುವ ಮೂಲಕ ದೇವಸ್ಥಾನಕ್ಕೆ ಬಂದು ತಲುಪಿತು.
ಸಾಯಂಕಾಲ ಜರುಗಿದ ರೇವಣಸಿದ್ದೇಶ್ವರ ಅಲಂಕೃತ ಬೆಳ್ಳಿ ಪಲಕ್ಕಿ ಉತ್ಸವದಲ್ಲಿ ರಾಜ್ಯ ಅಂತರಾಜ್ಯದಿಂದ ಆಗಮಿಸಿದ ಲಕ್ಷಾಂತರ ಭಕ್ತರು ಜಯಘೋಷಗಳನ್ನು ಕೂಗುತ್ತ ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ಉತ್ತುತ್ತಿ, ಬಾದಮಿ, ಬಾಳೆಹಣ್ಣು, ನಾಣ್ಯ, ಫಲಪುಷ್ಪಗಳನ್ನು ಸಮರ್ಪಿಸಿ ಕೃತಾರ್ಥರಾದರು. ಕೆಲವು
ಭಕ್ತರು ಪಲ್ಲಕ್ಕಿ ಎದರು ಉರುಳು ಸೇವೆ ಮಾಡಿ ತಮ್ಮ ಹರಕೆಯನ್ನು ತೀರಿಸಿದರು.
ರೇವಣಸಿದ್ದೇಶ್ವರ ಪಲ್ಲಕ್ಕಿ ಉತ್ಸವಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ಮುಂಕರಬಾ, ಕೋಡ್ಲಿ, ಕಂದಗೂಳ ಕ್ರಾಸ್ ಸೇರಿದಂತೆ ವಿವಿಧಡೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ರಟಕಲನ ಪೂಜ್ಯ ರೇವಣಸಿದ್ದ ಶಿವಾಚಾರ್ಯರು, ಪೂಜ್ಯ ಸಿದ್ಧರಾಮ ಮಹಾಸ್ವಾಮಿಗಳು, ರೇವಣಸದ್ಧ ಶರಣರು, ನಾಗೂರ ಪೂಜ್ಯ ಅಲ್ಲಮಪ್ರಭುಲಿಂಗ ಮಹಾಸ್ವಾಮಿಗಳು, ಚಂದನಕೇರಾ ಶ್ರೀಗಳು, ಬೇಲೂರ ಶ್ರೀಗಳು, ಕೇಂದ್ರ ಸಚಿವ ಭಗವಂತ ಖುಬಾ, ಕಲಬುರಗಿ ಸಂಸದ ಡಾ. ಉಮೇಶ ಜಾಧವ್, ಸೇಡಂ ಸಹಾಯಕ ಆಯುಕ್ತ, ದೇವಸ್ಥಾನ ಸಮಿತಿ ಅಧ್ಯಕ್ಷ ಆಶಪ್ಪ ಪೂಜಾರಿ, ಸಹಾಯಕ ಆಯುಕ್ತರ ಕಛೇತಿ ತಹಶಿಲ್ದಾರ ನಾಗನಾಥ ತರಗೆ, ಕಂದಾಯ ನೀರಿಕ್ಷಕ ಮಂಜುನಾಥ ಮಹಾರುದ್ರ, ಬಸವರಾಜ ಕಠೋಳ್ಳಿ, ದೇವಸ್ಥಾನ ಸಮಿತಿ ಕಾರ್ಯದರ್ಶಿ ಹೇಮಂತ ಜಗತಾಪ್, ಗ್ರಾಮ ಲೆಕ್ಕಿಗ ಸಂತೋಷ ಮಾನವಿಕರ್, ಮುಖಂಡರಾದ ಶಿವರಾಜ ಪಾಟೀಲ ಗೋಣಗಿ, ರುದ್ರಶೆಟ್ಟಿ ಗುರಮಿಠಕಲ್, ಮಾಹದೇವಪ್ಪ ಭಿಮ್ಬಳ್ಳಿ, ಸಿದ್ಧಯ್ಯಸ್ವಾಮಿ ಮುಕರಂಬಾ, ವೀರೇಶ ಮಠಪತಿ ಮುಕರಂಬಾ, ರೇವಣಸಿದ್ದಪ್ಪ ಚೇಂಗಟಿ, ಶಾಂತಕುಮಾರ ನಾಗೂರ, ರೇವಣಸಿದ್ದ ಬಡಾ ರಟಕಲ್, ಸಿದ್ದು ಚಿಟ್ಟಳಿ, ರೇವಣಸಿದ್ದಪ್ಪ ಕುರಿಕೋಟಾ, ಗಂಗಾಧರ ಸ್ವಾಮಿ ಬಸವಗುಡಿ, ಕಮಲಾಕರ್ ಕಡಗದ, ನಾಗೇಶ ಬಿರದಾರ, ಮಲ್ಲಣ್ಣ ಭೈರಪ್ಪ, ರಾಘವೇಂದ್ರ ಭೈರಪ್ಪ ಸೇರಿದಂತೆ ಲಕ್ಷಾಂತರ ಭಕ್ತರು ಹಾಜರಿದ್ದರು. ಶಹಾಬಾದ ಡಿವೈಎಸ್‍ಪಿ ಶೀಲವಂತ ನೇತೃತ್ವದಲ್ಲಿ ಸುಮಾರು 250ಜನ ಪೆÇೀಲಿಸ್ ಸಿಬ್ಬಂದಿಗಳು ಬಂದೋಬಸ್ತ್ ಒದಗಿಸಿದರು.