ಸಂಭ್ರಮದ ರಾಮನವಮಿ ಆಚರಣೆ

ಔರಾದ :ಏ.18: ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನವಾದ ಬುಧವಾರ ತಾಲ್ಲೂಕಿನಾದ್ಯಂತ ಸಡಗರ ಸಂಭ್ರಮದಿಂದ ರಾಮ ನವಮಿ ಆಚರಣೆ ಜರುಗಿತು. ಪ್ರತಿ ಗ್ರಾಮದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಭಕ್ತಿಭಾವದಿಂದ ಜರುಗಿದ್ದು ಕಂಡು ಬಂತು.

ರಾಮ ನವಮಿ ನಿಮಿತ್ತ ಬೆಳಿಗ್ಗೆಯಿಂದಲೆ ಭಕ್ತಾದಿಗಳು ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯ, ಭಜನೆ ಕೀರ್ತನೆ ಹಾಡಿದರು. ಮಾತೆಯರಿಂದ ಶ್ರೀ ರಾಮನಿಗೆ ತೊಟ್ಟಿಲು ತೂಗುವ ಕಾರ್ಯಕ್ರಮ ನಡೆದವು. ಭಕ್ತಿಯಿಂದ ವಿಶೇಷ ಪೂಜೆ ಮಹಾ ಮಂಗಳಾರತಿ ಅನ್ನ ಸಂತರ್ಪಣೆ ಜರುಗಿತು. ತಾಲೂಕಿನ ಹಿಪ್ಪಳಗಾವ ಗ್ರಾಮದ ಹನುಮನ ದೇಗುಲದಲ್ಲಿ ರಾಮನವಮಿ ಆಚರಣೆ ವಿಶೇಷವಾಗಿ ಕಂಡಿತು.

ಭಗವಾನ ಶ್ರೀ ರಾಮನು ಭೂಮಿಯ ಮೇಲಿನ ದೈವಿ ಸ್ವರೂಪರಾಗಿದ್ದಾರೆ, ಧರ್ಮದ ಮೂಲಕ ಜೀವನ ನಡೆಸುವುದನ್ನು ಹೇಳಿಕೊಟ್ಟಿದ್ದಾರೆ. ಈ ದಿನದ ಮೂಲಕ ಹೆಚ್ಚಿನ ನೈತಿಕತೆ ಹಾಗೂ ನೈತಿಕ ಮೌಲ್ಯಗಳ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಮುನ್ನಡೆಯೋಣ, ದೈವಿಕ ಪ್ರತಿರೂಪವಾಗಿರುವ ರಾಮ ತಮ್ಮ ಉದ್ದಾತ್ತ ಆದರ್ಶ ಹಾಗೂ ನೈತಿಕ ಮೌಲ್ಯಗಳ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಈ ಮೂಲಕ ನಾವು ಕೂಡ ಸಮಾಜವನ್ನು ಶ್ರೀಮಂತವಾಗಿ, ಶಾಂತಿಯುತವಾಗಿ ಹಾಗೂ ಸಾಮರಸ್ಯದಿಂದ ನಿರ್ಮಾಣ ಮಾಡೋಣ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

ಈ ಸಂದರ್ಭದಲ್ಲಿ ಉಮಾಕಾಂತ ಬಿರಾದಾರ, ವಿರೂಪಾಕ್ಷ ಬುಟ್ಟೆ, ಪ್ರಕಾಶ ಬಿರಾದರ, ಗಣಪತಿ ಸಿಂಗಾಳೆ, ಕೇಶವ ಬಿರಾದರ, ಬಾಲಾಜಿ ಬಿರಾದಾರ್, ವಿಟ್ಟಲ್ ಬಸ್ವಂತೆ, ವಿದ್ಯಾವತಿ ಬಿರಾದರ್, ರಾಧಿಕಾ ಬಿರಾದರ್, ಜನಾಬಾಯಿ, ಅನುಷಾಬಾಯಿ, ಸಂಗೀತ, ಶಾವುಬಾಯಿ ಹಾಗೂ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.