ಸಂಭ್ರಮದ ರಂಜಾನ್ ಈದ್: ಸಾಮೂಹಿಕ ಪ್ರಾರ್ಥನೆ

ವಾಡಿ:ಎ.22: ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಸತತ ಒಂದು ತಿಂಗಳ ಕಾಲ ಶ್ರದ್ಧೆ, ನಿಷ್ಠೆಯಿಂದ ಉಪವಾಸ ವೃತ್ತ ಹಾಗೂ ಕುರಾನ್ ಪಠನ, ತರಾವೀಹ್ ಪ್ರಾರ್ಥನೆ ಸಲ್ಲಿಸಿವು ಮೂಲಕ ಅಲ್ಲಾಹ್‍ನನ್ನು ಪ್ರಾರ್ಥನೆ ಮಾಡುವುದ ಸಂಪ್ರಾದಯವಾಗಿದೆ.

ಮುಸ್ಲಿಂ ಧರ್ಮದ ಗುರು ಮಹೆಬೂಬ್ ಮೌಲಿಸಾಬ್ ನೇತೃತ್ವದಲ್ಲಿ ಈದ್ಗ ಮೈದಾನದಲ್ಲಿ ಸಾಮೂಹಿಕ ನಮಾಜ್ ಪ್ರಾರ್ಥನೆ ಸಲ್ಲಿಸಲಾಯಿತು. ಹಿಂದೂ-ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಶುಭ ಕೋರುವದರ ಮೂಲಕ ಕೋಮು ಸೌಹಾರ್ದತೆಗೆ ಸಾಕ್ಷಿಯಾದರು. ವಾಡಿ ಪಟ್ಟಣ ಸೇರಿದಂತೆ ಎಲ್ಲೆಡೆ ರಂಜಾನ್ ಹಬ್ಬದ ಕಳೆ ಮನೆ ಮಾಡಿತ್ತು. ಪುಟ್ಟ ಯುವಕರು ವಿಶೇಷ ಬಟ್ಟೆ ಹಗೂ ಟೋಪಿ ಧರಿಸಿ ಹಬ್ಬದ ಕಳೆ ಹೆಚ್ಚಿಸಿದರು.

ಮುಖಂಡರಾದ ಎಮ್.ಡಿ ಯೂಶ್ಯಫ್ ಮುಲ್ಲಾ, ರಹೆಮನಸಾಬ್ ಬಾಂಬೆ, ಚಾಂದ್ ಪಾಶಾ, ಬಾಬು ಸಾಹೇಬ್, ಹುಸೇನ್ ಮುಲ್ಲಾ, ಹುಸೇನ್ ಸಾಬ್ ಬಾಂಬೆ, ಬಾಬುಮಿಯ್ಯ ಬಾಂಬೆ, ಮಕ್ಬುಲ್ ಆಲ್ಲೂರ, ಮಹೆಬೂಬ್ ಬಾಂಬೆ, ಗುಡುಸಾಬ್ ಬಾಂಬೆ ಸೇರಿದಂತೆ ಅನೇಕ ಗಣ್ಯರು ಪಾಲ್ಗೋಂಡಿದ್ದರು.