
ವಾಡಿ: ಆ.13:ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಮದ ದರ್ಗಾದಲ್ಲಿ ಕಳೆದ ಐದು ದಿನಗಳಿಂದೆ ಪ್ರತಿಷ್ಠಾಪಿಸಲಾದ ಕೌಡಿಪೀರ್ ಮೊಹರಂ ಉತ್ಸವಕ್ಕೆ ಗ್ರಾಮಸ್ಥರು ಅದ್ದೂರಿಯಾಗಿ ತೆರೆ ಎಳೆದರು.
ಗ್ರಾಮದ ದರ್ಗಾದಲ್ಲಿ ಕೂರಿಸಲಾದ ಕೌಡಿಪೀರ್‍ಗಳಿಗೆ ವಿವಿಧ ಬಗೆಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿತು. ಅಲಂಕೃತಗೊಂಡ ಪೀರ್‍ಗಳಿಗೆ ಸಾರ್ವಜನಿಕರು ಸಾಮೂಹಿಕವಾಗಿ ಜೈಕಾರ ಹಾಕಿದರು. ಹಿಂದೂ-ಮುಸ್ಲಿಂ ಬಾಂಧವರು ದೇವರಿಗೆ ನೈವೇದ್ಯ ನೀಡುವ ಮೂಲಕ ಭಕ್ತಿ ಸಮರ್ಪಿಸಿದರು. ಮೊಹರಂ ಹೆಸರಿನ ಮೇಲೆ ಕೆಲವರು ಉಪವಾಸ ವೃತ ಮಾಡಿ ಹರಕೆ ತಿರಿಸಿದರು. ಬಳಿಕ ಗ್ರಾಮದಲ್ಲಿ ಅಲಾಯಿ ಮೆರವಣಿಗೆ ನಡೆಸಿ ದಪಾನ್ ಮಾಡುವ ಮೂಲಕ ಮೊಹರಂ ಆಚರಣೆಗೆ ತೆರೆ ಎಳೆದರು. ಮೊಹರಂ ಹಾಡು, ಹೆಜ್ಜೆ ಕುಣಿತ ನೋಡುಗರ ಗಮನ ಸೆಳೆಯುತು.
ದರ್ಗಾದ ಸಾಹೇಬ್ ಸೈಯದ್ ಮುಸ್ತಾಫ್ ಹುಸೇನಿ ಸಾನಿಧ್ಯ ವಹಿಸಿದ್ದರು. ಗ್ರಾಪಂ ಸದಸ್ಯ ರಹೆಮನಸಾಬ್ ಬಾಂಬೆ, ಗ್ರಾಮದ ಮುಖಂಡರಾದ ಸೈಯದ್ ಶಾ.ಹುಸೇನಿ, ಸೈಯದ್ ಗೆಸುದ್ರಾಜ್ ಹುಸೇನಿ, ಬಸವರಾಜಗೌಡ ಪೊಲೀಸ್ ಪಾಟೀಲ, ಚಂದ್ರಪ್ಪ ಕರದಳ್ಳಿ, ಚಂದ್ರಪ್ಪ ಇಂದೂರ, ಸಿದ್ರಾಮ ಕರದಳ್ಳಿ, ಗಣೇಶ ಗುತ್ತೇದಾರ, ಕಾಶೀನಾಥ ಶಿರವಾಳ, ಬಸವರಾಜ ಸುಲೆಪೇಠ, ಖದೀರ್ ಮುಲ್ಲಾ, ಎಮ್.ಡಿ ಮಹೆಬೂಬ್, ಚಂದ್ರಪ್ಪ ಕೊಟಗಾರ, ಶಿವು ತಳವಾರ, ಖದೀರ್ ಅಲ್ಲೂರ್, ಬಾಬುರಾವ ಅಣಿಕೇರಿ, ಮರೆಪ್ಪ ಮಾಂಗ ಸೇರಿದಂತೆ ಅನೇಕರು ಇದ್ದರು.