ಸಂಭ್ರಮದ ಬಂಡ್ರಿ ಬಸವೇಶ್ವರ ರಥೋತ್ಸವ


ಸಂಜೆವಾಣಿ ವಾರ್ತೆ
ಸಂಡೂರು ಮಾ:2:  ಸಂಡೂರು ತಾಲ್ಲೂಕಿನ ಬಂಡ್ರಿ ಗ್ರಾಮದಲ್ಲಿ ಜನತೆ ಬಸವೇಶ್ವರನ ರಥೋತ್ಸವವನ್ನು ರಾಷ್ಟ್ರಿಯ ನಾಡಹಬ್ಬದಂತೆ ಆಚರಿಸಿ ಸಂಭ್ರಮದಿಂದ ಆಚರಿಸದರಲ್ಲದೇ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ತೇರನ್ನು ಎಳೆದು ಭಕ್ತಿಯನ್ನು ಸಮರ್ಪಿಸಿದರಲ್ಲದೇ ಆರಾದ್ಯ ದೈವ ಬಸವೇಶ್ವರನ ದರ್ಶನವನ್ನು ಕಣ್ತುಂಬಿ ಕೊಂಡರು. ಗ್ರಾಮದ ರಾಜಣ್ಣ ಪಲ್ಲೇದ ಪಟ ಸವಾಲಿನಲ್ಲಿ 1 ಲಕ್ಷದ 65 ಸಾವಿರಕ್ಕೆ ದೇವರ ಪಠವನ್ನು ಪಡೆದುಕೊಂಡಿದುದು ವಿಶೇಷವಾಗಿತ್ತು.

One attachment • Scanned by Gmail