
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ : ಮಾ.09:ತಾಲೂಕಿನ ಐತಿಹಾಸ ಪ್ರಸಿದ್ಧ ಶ್ರೀ ಬಂಡೆ ರಂಗನಾಥ ಸ್ವಾಮಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ನಡೆದ ಬ್ಯಾಟಿಗಿಡ ಉತ್ಸವ ಸಂಭ್ರಮದಿಂದ ಜರುಗಿತು.
ಬಂಡೇ ರಂಗನಾಥೇಶ್ವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಟಾಪಿಸಲಾಯಿತು. ಮೆರವಣಿಗೆ ಮುಖಾಂತರ ಗ್ರಾಮದ ಹೊರವಲಯದ ಹತ್ತಿರದಲ್ಲಿ (ಮುಳ್ಳುಕಂಟಿಗಿಡ )ಬ್ಯಾಟಿ ಗಿಡ ತೆಗೆದುಕೊಂಡು ಬಂದು ಪೂಜಿಸಲಾಯಿತು.
ಬೆಟ್ಟದ ಕೆಳಗಡೆ ಇರುವ. ತೇರು ಬೀದಿಯಲ್ಲಿ ಮೆರವಣಿಗೆ ಮೂಲಕ ತರಲಾಯಿತು. ಬ್ಯಾಟಿ ಗಿಡವನ್ನು ವಾಲ್ಮೀಕಿ ಸಮುದಾಯದ ಯುವಕರು ಹೊತ್ತುಕೊಂಡು ಮೇಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಕುಣಿಯುತ್ತಿದ್ದು ಭಕ್ತರನ್ನು ಭಾವಪರವಶಗೊಳಿಸಿದರು. ನಂತರ ಬ್ಯಾಟಿ ಗಿಡವನ್ನು ಬೆಟ್ಟದ ಮೇಲೆ ತೆಗೆದುಕೊಂಡು ಹೋದರು.
ವಿವಿಧ ಕಡೆಯಿಂದ. ಜಾತ್ರಾ ಮಹೋತ್ಸವಕ್ಕೆ ಈ ಭಾರಿ ಭೃಹತ್ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಬೆಟ್ಟದ ಮೇಲೆ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ತಂಬ್ರಹಳ್ಳಿ ಪೋಲಿಸ್ ಠಾಣೆಯ ಸಿಬ್ಬಂದಿಯವರು ಸೂಕ್ತ ಬಂದೋಬಸ್ತ ವ್ಯವಸ್ಥೆ ಕಲ್ಪಸಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿಯ. ಪದಾಧಿಕಾರಿಗಳು ಮುಖಂಡರು ಹಾಗೂ ಸುತ್ತಲಿನ. ಹತ್ತಾರು ಹಳ್ಳಿಗಳ ಭಕ್ತರು ಪಾಲ್ಗೊಂಡಿದ್ದರು.
One attachment • Scanned by Gmail