
ಔರಾದ :ಆ.22: ತಾಲೂಕಿನಾದ್ಯಂತ ಸೋಮವಾರ ಸಂಭ್ರಮದಿಂದ ನಾಗರ ಪಂಚಮಿಯನ್ನು ಆಚರಿಸಲಾಯಿತು. ವಿವಿಧ ನಾಗರ ಕಟ್ಟೆಗಳು, ವಿಗ್ರಹಗಳಿಗೆ ಹಾಲಿನ ಅಭಿಷೇಕ, ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ಪಟ್ಟಣದ ಉದ್ಭವಲಿಂಗ ಶ್ರೀ ಅಮರೇಶ್ವರರ ಮಂದಿರದಲ್ಲಿ ಭಕ್ತರು ಮುಂಜಾನೆಯಿಂದಲೇ ಮಹಿಳೆಯರು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಶ್ರಾವಣ ಮಾಸದ ಮೊದಲ ಸೋಮವಾರ ಹಾಗೂ ನಾಗ ಪಂಚಮಿ ಹಬ್ಬ ಒಂದೇ ದಿನ ಬಂದ ಪ್ರಯುಕ್ತ ಮಂದಿರದಲ್ಲಿ ಭಕ್ತರ ದಂಡು ಹೆಚ್ಚಾಗಿತ್ತು, ನಾಗರ ಪಂಚಮಿ ಎಂದರೆ ಮಹಿಳೆಯರಲ್ಲಿ ಖುಷಿ ತರುವ ಹಬ್ಬ, ಪ್ರತಿ ವರ್ಷ ಸಾಂಪ್ರದಾಯಿಕವಾಗಿ ನಾಗರ ಪಂಚಮಿ ಆಚರಿಸುತ್ತಾರೆ, ಮಹಿಳಾ ಮತ್ತು ಮಕ್ಕಳಿಗೆ ಎಲ್ಲಿಲ್ಲದ ಖುಷಿ ಇಡಿ ಕುಟುಂಬ ಸಮೇತ ಸೇರಿ ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಖಾದ್ಯಗಳನ್ನು ಸವಿಯುವ ಮೂಲಕ ಹಬ್ಬವನ್ನು ಆಚರಿಸಿ ಮಕ್ಕಳು ಮಹಿಳೆಯರು ಸೇರಿ ಉಯ್ಯಾಲೆ ಹಾಡಿ ಸಂಭ್ರಮಿಸಿದರು.