ಸಂಭ್ರಮದ ಜಾತ್ರಾಮಹೋತ್ಸವ

ಹುಬ್ಬಳ್ಳಿ, ಜೂ4: ನಗರದ ಅರವಿಂದ ನಗರದ ಶ್ರೀ ಹುಲಿಗೆಮ್ಮಾದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಶುಕ್ರವಾರ ದಿ: 24-05-2024 ರಿಂದ ದಿ: 02-06-2024 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆಯು ದೇವಸ್ಥಾನದಿಂದ ಹೊರಟು ಪ್ರಮುಖ ರಸ್ತೆಯಿಂದ ಹಳೇಹುಬ್ಬಳ್ಳಿಯಲ್ಲಿ ಸಂಚರಿಸಿ ಮೂಲ ದೇವಸ್ಥಾನಕ್ಕೆ ತಲುಪಿತು. ಸುಮಂಗಲೆ ಯರು ಶ್ರೀ ಲಕ್ಷ್ಮೀ ಶೋಭಾನ, ಲಲಿತ ಸಹಸ್ರ ನಾಮಾವಳಿಯನ್ನು ಪಠಿಸಿದರು. ನಂತರ ಶ್ರೀ ದೇವಿಯವರಿಗೆ ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು.
ಮಾತೋಶ್ರಿ ಡಾ. ಹುಲಿಗೆಮ್ಮಾ ಪೋಸಾ ಅಮ್ಮನವರು ಸಾನಿಧ್ಯವನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಮಹೇಶ ಟೆಂಗಿನಕಾಯಿ, ಸಮಾಜ ಸೇವಕಿ ಲಲಿತಾ ವಿಜಯ ಸಂಕೇಶ್ವರ, ಭಾರತಿ ಸಂಕೇಶ್ವರ, ಕು.ರಾಜಶ್ರೀ ಜಡಿ, ಹುಬ್ಬಳ್ಳಿಯ ವಕೀಲರ ಸಂಘದ ಅಧ್ಯಕ್ಷರಾದ ಎಮ್.ಎಸ್.ಬಾಣದ, ಬಿಜೆಪಿ ಮುಖಂಡರುಗಳಾದ ತೋಟಪ್ಪ ನಿಡಗುಂದಿ, ಅಶೋಕ ವಾಲ್ಮಿಕಿ, ಗುರು ಬನ್ನಿಕೊಪ್ಪ, ನ್ಯಾಯವಾದಿಗಳಾದ ಕು. ರಾಜೇಶ್ವರಿ ಬಗಲಿ, ಅನಿತಾ ಬಾಣದ, ನಾಗರಾಜ ಮಾಸಣಗಿ, ವಿಠ್ಠಲ ಬಗಲಿ, ಪ್ರಕಾಶ ಅರಗಂಜಿ, ಹಿರಿಯರಾದ ಮಲ್ಲೇಶಪ್ಪ ತಾಂಬೆ, ವಿಠ್ಠಲ್ ಏಕಬೋಟೆ, ನಾಗೇಶ ಕತ್ರಿಮಲ್, ವಿರುಪಾಕ್ಷಿ ಚಲವಾದಿ, ಯೋಗೇಶಗೌಡ ಪಾಟೀಲ, ಶ್ರೀಧರ ಮಗಜಿಕೊಂಡಿ, ಮನೋಜ ದೇಸಾಯಿ, ಶ್ರೀಧರ ಕನಮಕಲ್, ವೆಂಕಟೇಶ ನಿಡಗುಂದಿ, ಲಕ್ಷ್ಮಣ ವಡ್ಡರ, ಹನಮಂತಪ್ಪ ಕಡಕೋಳ, ಬಸವಂತಪ್ಪ ಅನವಾಲ, ನಾರಾಯಣಸಿಂಗ್ ರಜಪೂತ, ಯಲ್ಲಪ್ಪ ಕೋಸಗಿ, ವೆಂಕಟೇಶ ರತನ, ಸುರೇಂದ್ರ ಪಾಲನಕರ, ವೆಂಕಟೇಶ ಭೋಜಗಾರ, ಬಾಬು ಭೋಜಗಾರ, ಪರಶುರಾಮ ಸುಳ್ಳದ, ಪ್ರವೀಣ ಶೇಠ, ಶ್ರೀಮತಿ ಗುರಮ್ಮಾ ಹೆಳವರ, ಆಶಾ ರಜಪೂತ, ರೇಣುಕಾ ಕಂಬಾರ, ಶೋಭಾ ತಾಂಬೆ, ಪದ್ಮಾ ದಿವಟೆ, ಲತಾ ಹಳ್ಳಿಕೇರಿ, ಶಾಂತಾ ಮಣಿದವರ, ಲಕ್ಷ್ಮೀ ಬಾರಕೇರ, ರೇಖಾ ಸುಳ್ಳದ, ದೇವಸ್ಥಾನದ ಪ್ರಧಾನ ಅರ್ಚಕರಾದ ರವಿಕುಮಾರ ಮಡ್ಡಿ ಸೇರಿದಂತೆ ನೂರಾರು ಜನರು ಭಕ್ತಾದೀಗಳು ಆಗಮಿಸಿದ್ದರು.