ಸಂಭ್ರಮದ ಕ್ರಿಸ್‍ಮಸ್ ಆಚರಣೆ

ಬೀದರ:ಡಿ.28:ಕ್ರಿಸ್‍ಮಸ್ ಹಬ್ಬದ ಆರಾಧನೆಯೂ ಬೀದರ ತಾಲ್ಲೂಕಿನ ಮೆಥೋಡಿಸ್ಟ್ ಚರ್ಚ್ ಹಮಿಲಾಪೂರದಲ್ಲಿ ನಡೆಸಲಾಯಿತು. ಇದರಲ್ಲಿ ಸದರಿ ಚರ್ಚಿನ ಸಭಾಪಾಲಕರಾದ ರೇವರೆಂಡ್ ಸುರೇಶ ಕಾಡವಾದ ಇವರ ಸಮ್ಮುಖದಲ್ಲಿ ಪ್ರಾರ್ಥನೆ ಮಾಡುವ ಮೂಲಕ ಆರಾಧನೆ ಕೂಟವು ಪ್ರಾರಂಭಿಸಲಾಯಿತು.
ಈ ಕೂಟದಲ್ಲಿ ಯೇಸು ಕ್ರಿಸ್ತನ ಕುರಿತು ಆತನ ಜನನ ಹಾಗೂ ಉದ್ದೇಶದ ಬಗ್ಗೆ ಸವಿಸ್ತಾರವಾದ ರೀತಿಯಲ್ಲಿ ಮಾತನಾಡಿ ಸಭಿಕರಿಗೆ ದೈವಾ ಸಂದೇಶವನ್ನು ನೀಡಿದರು.
ಸದರಿ ಕೂಟದಲ್ಲಿ ಕೇಕ್ ಕಟ್ ಮಾಡುವುದರ ಮೂಲಕ ಕ್ರಿಸ್‍ಮಸ್ ವಿಶೇಷ ಗೀತೆಯನ್ನು ಮಕ್ಕಳ ಸಂಗಡಿಗರಿಂದ ಹಾಡಿದರು. ಇದೇ ರೀತಿಯಲ್ಲಿ ನೃತ್ಯ ಪ್ರದರ್ಶನ ಕೂಡ ಮಾಡಿದರು.
ಈ ಕಾರ್ಯಕ್ರಮದಲ್ಲಿ ಮೆಥೋಡಿಸ್ಟ್ ಚರ್ಚ್ ಸಭೆಯ ಸದಸ್ಯರು, ಮುಖಂಡರು, ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ವಿಜೃಂಭಣೆಯಿಂದ ಆಚರಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರೆಂದು ಸಭಾಪಾಲಕರಾದ ರೇವರೆಂಡ್ ಸುರೇಶ ಕಾಡವಾದ ರವರು ತಿಳಿಸಿದರು.