ಸಂಭ್ರಮದಿಂದ ವಿಶ್ವಕರ್ಮ ಜಯಂತಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.17: ನಗರದಲ್ಲಿಂದು ವಿಶ್ವಕರ್ಮ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ನಗರದ ಕಾಳಮ್ಮ ರಸ್ತೆಯಿಂದ ವಿಶ್ವಕರ್ಮ ಅವರ ಭಾವಚಿತ್ರದ ಮೆರವಣಿಗೆ ಬೆಳ್ಳಿ ರಥದಲ್ಲಿರಿಸಿ. ವಿವಿಧ ಜಾನಪದ ಕಲಾ ತಂಡಗಳು, ಮಹಿಳೆಯರ ಕುಂಬ ಕಳಸಗಳೊಂದಿಗೆ  ತೇರು ಬೀದಿ, ಬೆಂಗಳೂರು ರಸ್ತೆ, ಹೆಚ್ ಆರ್ ಜಿ ಸರ್ಕಲ್, ಗಡಗಿ ಚೆನ್ನಪ್ಪ ಸರ್ಕಲ್  ಮೂಲಕ  ಬಿಡಿಎಎ ಸಭಾಂಗಣಕ್ಕೆ ಬಂದು ತಲುಪಿತು.
ನಂತರ ವೇದಿಕೆ ಕಾರ್ಯಕ್ರಮ ನಡೆಯಿತು ಇದರಲ್ಲಿ ಸಮುದಾಯದ ಮುಖಂಡರು,
ಬಳ್ಳಾರಿ ಜಿಲ್ಲಾ ವಿಶ್ವಕರ್ಮ ವಿಕಾಸ ವೇದಿಕೆಯ ಅಧ್ಯಕ್ಷ ಚಂದ್ರಕಾಂತ ಸ ಸೋನಾರ ಮೊದಲಾದವರು ಪಾಲ್ಗೊಂಡಿದ್ದರು.

Attachments area