ಸಂಭ್ರಮದಿಂದ ನಡೆದ ಬಕ್ಕೇಶ್ವರ ಸ್ವಾಮಿ ರಥೋತ್ಸವ

ಸಂಜೆವಾಣಿ ವಾರ್ತೆ

ದಾವಣಗೆರೆ, ಏ. ೧೪; ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿ ಸೇವಾ ಸಂಘ, ಶ್ರೀ ಗುರು ಬಕ್ಕೇಶ್ವರ ಮಹಾಸ್ವಾಮಿ ರಥೋತ್ಸವ ಕಮಿಟಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಸಹಾ ಚೌಕಿಪೇಟೆಯಲ್ಲಿರುವ ಶ್ರೀ ಗುರು ಬಕ್ಕೇಶ್ವರ ಸ್ವಾಮಿಯ ಮಹಾ ರಥೋತ್ಸವವು ಸಹಸ್ರಾರು ಭಕ್ತ ಸಮೂಹದಲ್ಲಿ ಸಂಭ್ರಮದಿಂದ ಜಿಟಿ ಜಿಟಿ ಮಳೆಯ ಮಧ್ಯೆಯೂ ಮಹಾಸ್ವಾಮಿಯ ರಥೋತ್ಸವ ಸಂಭ್ರಮದಿAದ ನಡೆಯಿತು. ಈ ಬಾರಿ ನೂತನವಾಗಿ ನಿರ್ಮಿಸಿದ ರಥದಲ್ಲಿ ಸ್ವಾಮಿಯ ಮೂರ್ತಿಯೊಂದಿಗೆ ರಥೋತ್ಸವ ನಡೆದಿದ್ದು ವಿಶೇಷವಾಗಿತ್ತು. ಹೆಬ್ಬಾಳು ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆದ ಈ ರಥೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಹಿರಿಯ ಲೆಕ್ಕಪರಿಶೋಧಕ ಡಾ.ಅಥಣಿ ವೀರಣ್ಣ, ದೇವರಮನಿ ಶಿವಕುಮಾರ್ ಸೇರಿದಂತೆ ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು. ರಥೋತ್ಸವದ ಅಂಗವಾಗಿ ಇಂದು ಸಂಜೆ 7 ಗಂಟೆಯಿAದ ಮಹಾಸ್ವಾಮಿಯ ನಂದಿ ವಾಹನ ಓಕಳಿ ಮಹೋತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.