ಸಂಭ್ರಮದಿಂದ ನಡೆದ ಕೋಲಶಾಂತೇಶ್ವರ ಸ್ವಾಮಿಯ ರಥೋತ್ಸವ

ಹರಪನಹಳ್ಳಿ.ಏ.೭: ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಕೋಲಶಾಂತೇಶ್ವರ ಸ್ವಾಮಿಯ ರಥೋತ್ಸವವು ಅಪಾರ ಭಕ್ತರ ಮಧ್ಯೆ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿರವರ ನೇತೃತ್ವದಲ್ಲಿ ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು.ನಂದಿಕೋಲು, ಡ್ರಮ್ ಸೆಟ್,ಕೀಲು ಕುದುರೆ,ವಿವಿಧ ವಾದ್ಯಗಳು ರಥೋತ್ಸವಕ್ಕೆ ಮೆರಗು ನೀಡಿದವು.ಕೋಲಶಾಂತೇಶ್ವರ ಸ್ವಾಮಿಯ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿ ರಥದ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ಪಟ ಹಾಗೂ ವಿವಿಧ ಹೂವಿನ ಮಾಲೆಗಳನ್ನು ಹರಾಜು ಮಾಡಲಾಯಿತು. ನಂತರ ರಥೋತ್ಸವವನ್ನು ಭಕ್ತರು ಎಳೆಯಲು ಪ್ರಾರಂಭಿಸಿದರು.ನೆರೆದ ಅಪಾರ ಭಕ್ತರು ರಥಕ್ಕೆ ಬಾಳೆಹಣ್ಣನ್ನು ಎಸೆದು, ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆದು ಭಕ್ತಿ ಮೆರೆದರು.ರಥೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆದವು.ಸ್ವಾಮಿಯ ಉತ್ಸವಕ್ಕೆ ಕುವರಿಯರು ತಾವು ಬೆಳೆಸಿದ’ಅಗಿ’ ಅಂದರೆ ತೆಂಗಿನ ಚಿಪ್ಪಿನಲ್ಲಿ ಬೆಳೆಸಿದ ಗೋಧಿ, ಜೋಳ, ರಾಗಿ, ಮೆಕ್ಕೆಜೋಳ, ಭತ್ತ. ಈ ರೀತಿಯ ವಿವಿಧ ಸಸಿಗಳನ್ನು ಕಳಸದಲ್ಲಿಟ್ಟು ಬೆಳಗುವರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವೈ. ರೇಖಾ ಕೊಟ್ರೇಶ್, ಯುವ ಮುಖಂಡರಾದ ವೈ.ಡಿ.ಅಣ್ಣಪ್ಪ, ಪ್ರಶಾಂತ್ ಪಟೇಲ್, ಬಿ. ರಾಮಣ್ಣ, ವೈ. ಟಿ. ಕೊಟ್ರೇಶ್,ಆನಂದಪ್ಪ,ಎ. ಹೆಚ್. ನಾಗರಾಜ್, ಎ. ಹೆಚ್. ಕೊಟ್ರೇಶ್, ಅಡ್ಡಿ ಚನ್ನವೀರಪ್ಪ.ಕೆ, ಎಮ್. ವಿಶ್ವನಾಥಯ್ಯ, ಎ.ಹೆಚ್. ಪಂಪಣ್ಣ, ಪೂಜಾರ ಮರಿಯಪ್ಪ, ಚಂದ್ರಪ್ಪ, ಪರುಶುರಾಮ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಎಂ.ಚಂದ್ರಪ್ಪ ಇದ್ದರು.