ಸಂಭ್ರಮದಿಂದ ಜರುಗಿದ ಕೈಲಾನಾಥೇಶ್ವರ ಜಾತ್ರಾ ಮಹೋತ್ಸವ

ಸಂಜೆವಾಣಿ ವಾರ್ತೆ
ಹುಮನಾಬಾದ್ :ಮಾ.9:ಮಹಾಶಿವರಾತ್ರಿ ನಿಮಿತ್ತ ತಾಲೂಕಿನ ಹಳ್ಳಿಖೇಡ (ಕೆ) ಗ್ರಾಮದಲ್ಲಿ ಶುಕ್ರವಾರ ಕೈಲಾನಾಥೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬಳಿಕ ಕೈಲಾಸನಾಥೇಶ್ವರ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೈಲಾಸನಾಥೇಶ್ವರ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು.
ಮೆರವಣಿಗೆ ದಾರಿಯುದ್ದಕ್ಕೂ ಡೊಳ್ಳು ಕುಣಿತ, ಲಂಬಾಣಿ ಕುಣಿತ, ಭಜನೆ ಹಾಗೂ ವಿವಿಧ ಸಾಂಸ್ಕøತಿಕ
ಜಾತ್ರೆ ಮತ್ತು ಮಹಾಶಿವರಾತ್ರಿ ನಿಮಿತ್ತ ವಿದ್ಯುತ್ ದೀಪ ಮತ್ತು ತಳಿರು ತೋರಣಗಳಿಂದ ಅಲಂಕೃತ ದೇವಸ್ಥಾನದಲ್ಲಿ ಬೃಹದಾಕಾರದ ಶಿವನ . ನಂತರ ದೇವಸ್ಥಾನದಿಂದ ಪ್ರಮುಖ ಬೀದಿಗಳ ಮುಖಾಂತರ ವೈಭವದ ಪಲ್ಲಕ್ಕಿ ಮೆರವಣಿಗೆ ಸಾಗಿತು. ಕುಂಭ ಕಳಶ ಹೊತ್ತ ಮಹಿಳೆಯರು, ವ ಪ್ರದರ್ಶನ, ಲಂಬಾಣಿ ಮಹಿಳೆಯರ ಜಾನಪದ ನೃತ್ಯ, ಪುರವಂತರ ವೀರಾಗಾಸೆ, ಮಹಾರಾಷ್ಟ್ರದ ವಿಶೇಷ ಜಾನಪದ ನೃತ್ಯ, ತಂಡಗಳೂ ಪಲ್ಲಕ್ಕಿ ಉತ್ಸವದ ಮೆರುಗು ಹೆಚ್ಚಿಸಿದವು.ಮೆರವಣಿಗೆಯಲ್ಲಿ ಭಾಗವಹಿಸಿದ್ದ, ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.ಕಾರ್ಯಕ್ರಮಗಳು ನೋಡುಗರ ಕಣ್ಮನ ಸೇಳೆದವು. ಜಾತ್ರೆಗೆ ಆಗಮಿಸಿದ ಭಕ್ತರಿಗಾಗಿ ಅನ್ನದಾಸೋಹ ಆಯೋಜನೆ ಮಾಡಲಾಗಿತ್ತು.
ಈ ವೇಳೆ ಮಾಜಿ ಸಚಿವ ರಾಜಶೇಖರ ಪಾಟೀಲ್, ಶಿವಪುತ್ರಪ್ಪ ವಾರದ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ಉದ್ಯಮಿ ಸಂತೋಷ ಪಾಟೀಲ್, ಮಹೇಂದ್ರ ವಾರದ, ಸುಭಾಷ ವಾರದ, ಮೋಹನ ವಾರದ, ಚಂದ್ರಕಾಂತ ಕುಂಬಾರ, ಸುಭಾಷ ಚೀಲಶೆಟ್ಟಿ, ಅಣೇಪ್ಪ ರಟಕಲೆ, ಸಂಗಮೇಶ್ವರ ಸಿದ್ದೇಶ್ವರ, ಮಹೇಶ ಚೀಲಶೆಟ್ಟಿ ಭೀಮಶಾ ಕೋರಿ, ಉದಯಕುಮಾರ ವಾರದ, ಪ್ರಕಾಶ ಬಾವಗಿ, ಸಿದ್ದಪ್ಪ ಹುಣಸಗೇರಾ,ಮೈಲಾರಿ ಬುಕ್ಕಾ, ರಾಘವೇಂದ್ರ ರಟಕಲೆ, ಪ್ರಶಾಂತ ಹೊನ್ನಳ್ಳಿ, ವಿವೇಕಾನಂದ ಕೋರಿ, ಸಿದ್ದು ಇಂಡಿ ಸೇರಿದಂತೆ ಅನೇಕರು ಭಕ್ತರು ಇದ್ದರು.