ಸಂಭ್ರಮದಲ್ಲಿಜರುಗಿದ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಪಲ್ಲಕ್ಕಿ ಉತ್ಸವ

ಗೋಕಾಕ,ಏ21: ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿರುವತಾಲ್ಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರರ ಜಾತ್ರೆಯ ಪಲ್ಲಕ್ಕಿ ಮಹೋತ್ಸವವು ಸಹಸ್ರಾರು ಭಕ್ತರ ಸಂಗಮದಲ್ಲಿ ಸಂಭ್ರಮ, ಸಡಗರದಿಂದಜರುಗಿತು.
ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಹಸಿರು ರಾಜಪೋಷಾಕಿನೊಡನೆ ಸಕಲ ರಾಜಮರ್ಯಾದೆ, ಬಿರುದಾವಳಿಗಳಿಂದ ಅಲಂಕೃತರಾಗಿ, ಮಂಗಳವಾದ್ಯ, ಭಜನೆ, ಡೊಳ್ಳು, ಮುತ್ಯೈದಿಯರಆರತಿ, ಕಳಶ, ಕನ್ನಡಿಗಳೊಂದಿಗೆಸಾವಳಗಿ, ಮುತ್ನಾಳ, ನಂದಗಾಂವ, ಖಾನಾಪುರ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿಉತ್ಸವು ಭಕ್ತಿಭಾವದಲ್ಲಿಜರುಗಿತು. ಪಲ್ಲಕ್ಕಿ ಬರುವದಾರಿಯುದ್ದಕ್ಕೂ ಭಕ್ತರು ನೀರು ಹಾಕಿ, ಪುಷ್ಪಗಳ ಮಳೆಗೈದರು.
ವೇದಿಕೆಯಲ್ಲಿ ಸಂಜೆಜರುಗಿದದರ್ಬಾರ ಸಮಾರಂಭದಲ್ಲಿಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಮಾತನಾಡಿ `ನಂಬಿಕೆ, ನಿಜ ಭಕ್ತಿಯಲ್ಲಿದೇವರಿದ್ದು, ಅಂತರಂಗದಿಂದದೇವರನ್ನು ಸ್ಮರಿಸುವ ಮೂಲಕ ದೇವರಅನುಗ್ರಹಕ್ಕೆ ಪಾತ್ರರಾಗಬೇಕು’ ಎಂದರು.
.ಎಲ್ಲ ಧರ್ಮಶಾಸ್ತ್ರಗಳು ಮನುಕುಲದ ಹಿತವನ್ನು, ಏಳ್ಗೆಯನ್ನು ಬಯಸುತ್ತಿದ್ದು, ಪ್ರತಿ ವ್ಯಕ್ತಿಯು ನಡೆ, ನುಡಿಗಳಲ್ಲಿ ಸದ್ಭಾವ ರೂಢಿಸಿಕೊಂಡು ಬದುಕನ್ನು ಸುಂದರವಾಗಿಸಿಕೊಳ್ಳಬೇಕು ಎಂದರು.
ಚನ್ನವೀರಸ್ವಾಮಿ ಹಿರೇಮಠಕಡಣಿಅವರುಜಗದ್ಗರು ಶಿವಲಿಂಗೇಶ್ವರ ಪುರಾಣವನ್ನು ಮಂಗಲ ಮಾಡಿದರು.
ಗಾನಭೂಷಣ ವೀರೇಶಕಿತ್ತೂರಅವರಗಾಯನ, ಶ್ವೇತಾ ಬಡಿಗೇರ, ಧನ್ಯಾ ಪಾಟೀಲ ಅವರ ಭರತನಾಟ್ಯ ಮತ್ತುಚಿತ್ರದುರ್ಗದ ಸುಶೀಲಮ್ಮಅವರಏಕಪಾತ್ರಾಭಿನಯವುಎಲ್ಲರ ಗಮನಸಳೆಯಿತು.
ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು, ರೋಹಿಣಿ ಹಾಗೂ ಶಿಕ್ಷಕ ಎಂ.ಎಸ್. ತೋಡಕರ ನಿರೂಪಿಸಿದರು.