
ಹರಿದ್ವಾರ,ಅ.೧೮-ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಗೆ ಮೊಬೈಲ್ ಫೋನಿನಲ್ಲಿ ಸಂಭಾಷಣೆ ಮಾಡುತ್ತಲೇ ಸೆಲ್ಯೂಟ್ ಹೊಡೆದ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ.
ಕೋಟ್‌ದ್ವಾರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಭೇಟಿ ನೀಡಿದರು.
ಹೆಲಿಕಾಪ್ಟರ್ ನಲ್ಲಿ ಫೋನ್ ನಲ್ಲಿ ಬಂದಿಳಿದ ಸಿಎಂಗೆ ಕೋಟ್ ದ್ವಾರ ಎಎಸ್ ಪಿ ಶೇಖರ್ ಸುಯಾಲ್ ಮೊಬೈಲನಲ್ಲಿ ಮಾತನಾಡುತ್ತಾ ಸೆಲ್ಯೂಟ್ ಹೊಡೆದರು
ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಉನ್ನತ ಅಧಿಕಾರಿಗಳು ಎಸ್ಪಿಯನ್ನು ನರೇಂದ್ರನಗರ ಪೊಲೀಸ್ ತರಬೇತಿ ಕೇಂದ್ರಕ್ಕೆ ವರ್ಗಾಯಿಸಿದ್ದಾರೆ.
ಆಗಸ್ಟ್ ೧೧ ರಂದು ಗ್ರಾಸ್ತಂಗಂಜ್ ಹೆಲಿಪ್ಯಾಡ್‌ನಲ್ಲಿ ಈ ಘಟನೆ ನಡೆದಿದೆ. ಸಿಎಂ ಹರಿದ್ವಾರದಿಂದ ಹೆಲಿಕಾಪ್ಟರ್‌ನಲ್ಲಿ ಬರುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಸ್ಥಳೀಯ ಅಧಿಕಾರಿಗಳು ಹೆಲಿಪ್ಯಾಡ್‌ಗೆ ತೆರಳಿ ಅವರನ್ನು ಬರಮಾಡಿಕೊಂಡರು. ಅದೇ ವೇಳೆಗೆ ಅಲ್ಲಿಗೆ ಬಂದ ಎಎಸ್ಪಿ ಒಂದು ಕೈಯಿಂದ ಕಿವಿಯ ಬಳಿ ಫೋನ್ ಹಿಡಿದು ಇನ್ನೊಂದು ಕೈಯಿಂದ ಸಿಎಂಗೆ ಸೆಲ್ಯೂಟ್ ಹೊಡೆದಿದ್ದಾರೆ. ವರ್ಗಾವಣೆಗೊಂಡಿರುವ ಶೇಖರ್ ಸುಯಲ್ ಅವರ ಜಾಗದಲ್ಲಿ ಕೋಟ್‌ದ್ವಾರದ ಹೊಸ ಎಎಸ್‌ಪಿಯಾಗಿ ಜೇ ಬಲುನಿ ಅವರನ್ನು ನೇಮಿಸಲಾಗಿದೆ.