ಸಂಬಂಧಗಳ ಮೌಲ್ಯ ಅರಿತು ಜೀವನ ಸಾಗಿಸಿದಾಗ ಸಾರ್ಥಕತೆ


ಕುಂದಗೋಳ,ಡಿ. ಜ್ಞಾನದ ಸಂಕೇತವಾದ ದೀಪದಂತೆ ಮಾನವ ಬೆಳಗಬೇಕು, ಸಂಬಂಧಗಳ ಮೌಲ್ಯವನ್ನು ಅರಿತು ನಾವು ಜೀವನ ಸಾಗಿಸಿದಾಗ ನಮ್ಮ ಜನ್ಮ ಸಾರ್ಥಕ ಎಂದು ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ಕುಂದಗೋಳ ಸವಾಯಿ ಗಂಧರ್ವ ಸ್ಮಾರಕ ಸಭಾಭವನದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಹಾಗೂ ಕುಂದಗೋಳ ತಾಲೂಕು ಮಟ್ಟದ ವಾಲ್ಮೀಕಿ ನಾಯಕ ಜನಜಾಗೃತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ವಾಲ್ಮೀಕಿ ಅವರು ರಾಮಾಯಣ ಕಾವ್ಯದ ಮೂಲಕ ಜಗತ್ತಿಗೆ ತಮ್ಮ ಸಂದೇಶವನ್ನು ಸಾರಿದ್ದಾರೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಮಾಜದ ಯುವ ಮುಖಂಡ ಚಂದ್ರಶೇಖರ್ ಜುಟ್ಟಲ ಅವರು ಮಾತನಾಡಿ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಫೆ. 8 ಹಾಗೂ 09 ರಂದು ನಡೆಯುವ ಜಾತ್ರಾ ಮಹೋತ್ಸವದಲ್ಲಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸಮಾಜದ ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ವಾಲ್ಮೀಕಿ ಭವನ ನಿರ್ಮಾಣಕ್ಮಾಕೆ ಸಹಾಯ ಹಸ್ತ ಚಾಚಿದ ದಾನಿಗಳು ಮತ್ತು ಪ.ಪಂ ಸದಸ್ಯರು ಜತೆಗೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ಸು ಸನ್ಮಾನಿಸಿ ಗೌವರವಿಸಲಾಯಿತು.
ವೇದಿಕೆಯಲ್ಲಿ ಪರಮೇಶ್ವರಪ್ಪ ನಾಯ್ಕರ,ಮೋಹನ ಗುಡಿಸಲಮನಿ,ಗ್ರಾಪಂ ಅಧ್ಯಕ್ಷರಾದ ರಾಜು ಪುಟ್ಟಣ್ಣವರ, ರಾಜು ದೊಡ್ಡ ಶಂಕರ ಹಾಗೂ ಬಸವರಾಜ ನಾಯ್ಕರ,ಮಾರುತಿ ಕಲ್ಲೂರ,ಮಹದೇವಪ್ಪ ತಳವಾರ,ಸಿದ್ದಲಿಂಗಪ್ಪ ಕರೆನ್ನವರ ಜಗದೀಶ ಕೇರಿಮನಿ, ಶಂಕ್ರಪ್ಪ ಹಿತ್ತಲಮನಿ,ರವೀಂದ್ರ ದೊಡಮನಿ, ಪ.ಪಂ ಸದಸ್ಯ ಬಸುರಾಜ ತಳವಾರ, ಮಂಜು ಹುಡೆದ, ಜಿ.ಎನ್. ಕುಬಿಹಾಳ, ಪ.ಪಂ.ಸದಸ್ಯರು, ಪ.ಪಂ.ಮುಖ್ಯಾಧಿಕಾರಿ ಯಲ್ಲಪ್ಪ ಮಾವಿನಕಾಯಿ,ಸಿಪಿಐ ಶಿವಾನಂದ ಅಂಬಿಗೆರ, ಅಡಿವೆಪ್ಪ ಹೆಬಸೂರ, ಅಜ್ಜಪ್ಪ ತಳವಾರ, ಬಸುರಾಜ ದೀಪಳ್ಳಿ ಸೇರಿದಂತೆ ಅನೇಕರಿದ್ದರು.ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ಹಾಗೂ ಗ್ರಾಪಂ ಅಧ್ಯಕ್ಷ ರಾಜು ದೊಡ್ಡಶಂಕರ ಸ್ವಾಗತಿಸಿದರು, ಮಂಜುನಾಥ ಬಾರಕೇರ ನಿರೂಪಿಸಿ ವಂದಿಸಿದರು.