ಸಂಪ್ರದಾಯ ಸೌರಭ’ ಕಾರ್ಯಕ್ರಮ

ಧಾರವಾಡ,ಏ2 : ಹಳ್ಳಿಯ ಹಾಡುಗಳಲ್ಲಿ ಆಧುನಿಕತೆಯನ್ನು ಬೆರೆಸಿ ಹಾಡುವುದನ್ನು ರೂಢಿಸಿಕೊಳ್ಳಬೇಕಾಗಿದೆ ಎಂದು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಹಾಗೂ ಸಾಹಿತಿ ಬಸು ಬೇವಿನಗಿಡದ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಕಲಾಮಂಟಪವು, ಸುವರ್ಣ ಮಹಿಳೆಯರ ಕನಸಿನ ಧಾರವಾಡ ಅವರಿಂದ ಆಯೋಜಿಸಿದ್ದಸಂಪ್ರದಾಯ ಸೌರಭ’ ಗ್ರಾಮೀಣರ ಹಬ್ಬದ ಹಾಡು-ಪಾಡು ಮತ್ತು ಹಳ್ಳಿಯ ಸೊಗಡಿನಿಂದ ಪ್ಯಾಟಿಯ ಕಡೆಗೆ, ಉಡುಗೆ-ತೊಡುಗೆಯ ನಡಿಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಇಂದು ನಮ್ಮ ಮಕ್ಕಳಿಗೆ ನಮ್ಮ ಹಬ್ಬಗಳ ಕುರಿತು, ಸಂಪ್ರದಾಯಗಳ ಕುರಿತು ತಿಳಿಸುವ ಕೆಲಸ ಆಗಬೇಕಿದೆ. ನಮ್ಮ ಹಬ್ಬಗಳಲ್ಲಿ ಆಧುನಿಕತೆಯನ್ನು ಸೇರಿಸಿ ಆಚರಿಸುವ ಬದಲಾವಣೆಯನ್ನು ಕೂಡ ಮಾಡಿಕೊಳ್ಳಬೇಕಾಗಿದೆ.ಗ್ರಾಮೀಣರಲ್ಲಿ ಪುರುಷರುಕೂಡಕುಟುಂಬದಲ್ಲಿ ಕೈಜೋಡಿಸಿ ಸಹಕರಿಸುತ್ತಿದ್ದರು.ಪ್ರತಿಯೊಂದು ಹಬ್ಬ ಹರಿದಿನಗಳನ್ನು ಬರಿ ಹೆಣ್ಣು ಮಕ್ಕಳಷ್ಟೇ ಅಲ್ಲದೆಗಂಡು ಮಕ್ಕಳು ಕೂಡ ಅಷ್ಟೇ ಸಂಭ್ರಮದಿಂದಆಚರಿಸುತ್ತಿದ್ದರು.ಈಗ ಪಟ್ಟಣಗಳಲ್ಲಿ ಆ ಸಂಸ್ಕಾರಕಡಿಮೆಯಾಗುತ್ತಿದ್ದುಇಂದುಯುವಜನಾಂಗದಲ್ಲಿ ಈ ಕುರಿತಜಾಗೃತಿಯನ್ನು ಮೂಡಿಸಬೇಕಾಗಿದೆ ಹಬ್ಬ ಹರಿದಿನಗಳು ವೈಜ್ಞಾನಿಕವಾಗಿ ನಮ್ಮಜೀವನದ ಪಾಠಗಳಾಗಿವೆ. ಉತ್ತರಕರ್ನಾಟಕದ ಹಬ್ಬ ಹರಿದಿನಗಳಲ್ಲಿ ಶ್ರೀಮಂತವಾದ ಸಂಸ್ಕಾರತುಂಬಿದೆ.ನಿಸರ್ಗವನ್ನು ನಾವು ಕಾಪಾಡಿಕೊಳ್ಳುವ ಹಿನ್ನೆಲೆಯಲ್ಲಿ ಈ ಪ್ರತಿಯೊಂದು ಹಬ್ಬಗಳು ಪೂರಕವಾಗಿವೆ. ಹಲವಾರು ಮಾಧ್ಯಮಗಳ ಆಕರ್ಷಣೆಗೆ ಸಿಲುಕಿ ನಮ್ಮ ಪರಂಪರೆ ಹಾಗೂ ಗ್ರಾಮೀಣರ ಬದುಕು, ಆಚರಣೆಗಳು ಸೊರಗುತ್ತಿರುವುದನ್ನುಇತ್ತೀಚಿಗೆ ನಾವು ನೋಡುತ್ತಿದ್ದೇವೆ.
ಜನಪದವೆಂಬುದು ನಿಂತ ನೀರಾಗಬಾರದು ಹೊಸ ಹೊಸ ಪೀಳಿಗೆಗೆ ಹೊಸ ಹೊಸದನ್ನು ಸೇರಿಸುತ್ತಾ ಸದಾ ನಮ್ಮತನವನ್ನು ಉಳಿಸಿಕೊಂಡು ಬದುಕನ್ನು ಶ್ರೀಮಂತ ಗೊಳಿಸಿಕೊಳ್ಳಬೇಕು. ಜನಪದ ಹಾಡುಗಳು ಹುಟ್ಟಿದ್ದೆ ಮಹಿಳೆಯರಿಂದ. ಭೌತಿಕ ಪರಂಪರೆಯಿಂದ ಬಂದಂತ ಹಾಡುಗಳಲ್ಲಿ ಶ್ರೀಮಂತವಾದ ಕಲ್ಪನೆಇದೆ.ಅದು ಬರಿ ಮಹಿಳೆಯರಿಗಾಗಿ ಇರದೆ ಪುರುಷರುಕೂಡಆಸ್ವಾದಿಸುತ್ತಅನುಭವಿಸುತ್ತಾ, ಇಂದು ಶಹರಗಳಲ್ಲಿ ಉಳಿಸಿಕೊಳ್ಳುವ ಕೆಲಸದಲ್ಲಿತೊಡಗಬೇಕಿದೆ. ಹೆಣ್ಣು ಮತ್ತುಗಂಡು ಮಕ್ಕಳಿಗೆ ಸಮವಾದ ಶಿಕ್ಷಣ ಸಂಸ್ಕಾರಎಲ್ಲವನ್ನು ಕಲಿಸಿಕೊಟ್ಟು ಅವುಗಳನ್ನು ಉಳಿಸಿಕೊಳ್ಳುವಲ್ಲಿ ಅವರು ಪಡಬೇಕಾದ ಪರಿಶ್ರಮವನ್ನುಕೂಡ ತಿಳಿಸಬೇಕಾಗಿದೆ. ಈ ಕುರಿತಂತೆ ಇಂದಿಗೂ ಆಕಾಶವಾಣಿಧಾರವಾಡ ಈ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಲಿದ್ದು ನಾಡಿಗೆ ಮಾದರಿಯಾಗಿದೆಎಂದು ಬಸು ಬೇವಿನಗಿಡದ ಹೇಳಿದರು.
ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ನಾವು ಇಂದು ಬದುಕಬೇಕಾದರೆ ನಿಸರ್ಗವನ್ನು ಕಾಯ್ದುಕೊಳ್ಳಬೇಕಿದೆ. ಹಳೆಯ ಬೇರು ಹೊಸ ಚಿಗುರು ಸೇರಿದಾಗ ಮಾತ್ರ ಬದುಕು ಸುಸೂತ್ರವಾಗಿ ಸಾಗುತ್ತದೆ. ಮಹಿಳೆಯರು ನಮ್ಮ ನಾಡಿನ ನಿಸರ್ಗದಕೊಡುಗೆಯನ್ನುತೆರೆದಿಟ್ಟಿದ್ದಾರೆ.ಮುಂದಿನ ಪೀಳಿಗೆ ಅದನ್ನು ಬಳಸಿಕೊಂಡಲ್ಲಿ ಅವರ ಬದುಕುಎಲ್ಲದರಲ್ಲಿಯೂ ಶ್ರೀಮಂತವಾಗಿರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಕ.ವಿ.ವ. ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಮಾತನಾಡುತ್ತಾ, ಹಳ್ಳಿಗಳಲ್ಲಿಯೂ ಕೂಡ ಸಾಕಷ್ಟು ಬದಲಾವಣೆಯನ್ನುಕಾಣುತ್ತಿದ್ದೇವೆ. ಹಳ್ಳಿಗರ ಹಬ್ಬ, ಹರಿದಿನ, ಆಚರಣೆ ಸಂಪ್ರದಾಯ, ಕಲೆ ಎಲ್ಲವನ್ನು ಪಟ್ಟಣದಜನ ಉಳಿಸಿಕೊಂಡು ಹೋಗಬೇಕಾಗಿದೆಎಂದರು.
ಸುವರ್ಣ ಮಹಿಳೆಯರ ಕನಸಿನ ಧಾರವಾಡತಂಡ ಸಂಪ್ರದಾಯ ಸೌರಭದಲ್ಲಿ ನಾವು ಆಚರಿಸುವ ಪ್ರತಿಯೊಂದು ಹಬ್ಬಗಳ ಕುರಿತುಚರ್ಚೆಯನ್ನು ಮಾಡುತ್ತಾ ಹಾಡುಗಳನ್ನು ಹೇಳುತ್ತಾ ಲವಲವಿಕೆಯಿಂದ ಸಂಭ್ರಮಿಸಿದರು.ಎಲ್ಲಾ ಹಬ್ಬಗಳ ದಿನ ನಮ್ಮ ಆಚರಣೆಗಳನ್ನು ಹೇಗೆ ಮಾಡುತ್ತೇವೆಎಂಬುದನ್ನು ಪರಿಕರಗಳ ಸಮೇತ ವೇದಿಕೆಯನ್ನು ಸಿಂಗರಿಸಿದ್ದರು.ಅಲ್ಲದೆ ಹಳ್ಳಿಯ ಸೊಗಡಿನಿಂದ ಪ್ಯಾಟೆಯಕಡೆಗೆ, ಉಡುಗೆ-ತೊಡುಗಡೆಯ ನಡಿಗೆಎನ್ನುವಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಆರಂಭದಲ್ಲಿಕಲಾಮಂಟಪದ ಸಲಹಾ ಸಮಿತಿಯ ಸದಸ್ಯರಾದಡಾ.ಪ್ರಭಾ ನೀರಲಗಿ ಸ್ವಾಗತಿಸಿದರು, ಸಂಚಾಲಕಿ ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಆಶಾ ಸೈಯದ್ ವಂದಿಸಿದರು.ವಿಷಯಾಜೇವೂರ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಡಾ.ಶೈಲಜಾಅಮರಶೆಟ್ಟಿ, ವೀರಣ್ಣಒಡ್ಡೀನ, ಡಾ.ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಗಿರಿಜಾ ಹಿರೇಮಠ, ಮಹಾಂತೇಶ ನರೇಗಲ್, ಭಾಗ್ಯಾ ನಡಕಟ್ಟಿ, ಗುರುಕಲ್ಮಠ, ನಾಗಭೂಷಣ ಹಿರೇಮಠ, ಭಾರತಿಕಲ್ಮಠ, ಜ್ಯೋತಿ ಭಾವಿಕಟ್ಟಿ, ಸುನಿತಾ ವಾಸರದ, ರಾಜಶೇಖರ ಬಶೆಟ್ಟಿ, ಸುವರ್ಣ ಮುಕ್ತಾಮಠ, ನಂದಾ ಗುಳೇದಗುಡ್ಡ ಮುಂತಾದವರಿದ್ದರು.