
ಅರಸೀಕೆರೆ, ಸೆ. ೧೬- ತಾಲ್ಲೂಕಿನ ಸುಪ್ರಸಿದ್ದ ಕ್ಷೇತ್ರವಾದ ಮಾಡಾಳು ಗೌರಮ್ಮ ರಾಜ್ಯಕ್ಕೆ ಹೆಸರುವಾಸಿಯಾಗಿದ್ದು ನಾಡಿನೆಲ್ಲೆಡೆಯಿಂದ ಗೌರಿ-ಗಣಪತಿ ಹಬ್ಬದ ಸಮಯದಲ್ಲಿ ಭಕ್ತಾದಿಗಳು ಮಾಡಾಳು ಗೌರಮ್ಮನ ದರ್ಶನಕ್ಕೆ ಬಂದು ಹೋಗುವುದು ಸಾಮಾನ್ಯ ಸಂಗತಿಯಾಗಿದೆ.
ಚೌತಿ ಸಮೀಪಿಸುತ್ತಿದ್ದಂತೆ ಹಿಂದೂ ಸಂಪ್ರಾದಾಯದಲ್ಲಿ ಮುತ್ತೈದೆಯರಿಗೆ ಸಂಭ್ರಮ ಸಡಗರ ಹಾಗೂ ತವರು ಮನೆಯಿಂದ ತರುವ ಬಾಗಿಣ ಕೊಡುವುದು ಸಂಪ್ರದಾಯ ಮತ್ತು ಸದಾಕಾಲ ತವರುಮನೆ ಎಂದರೆ ಹೆಣ್ಣು ಮಕ್ಕಳಿಗೆ ಖುಷಿಯೋ ಖುಷಿ.
ಅರಸೀಕೆರೆಯಿಂದ ೩೦ ಕಿ.ಮೀ. ದೂರದಲ್ಲಿರುವ ಮಾಡಾಳು ಗ್ರಾಮಕ್ಕೆ ಹಿಂದಿನಿಂದಲೂ ಸಾಂಪ್ರದಾಯಕವಾಗಿ ಹಾರನಹಳ್ಳಿ ಕೋಡಿಮಠದಿಂದ ಶ್ರೀಗಳು ಮೂಗುತಿ ತಂದು ಮಾಡಾಳು ಗ್ರಾಮದಲ್ಲಿ ಇರುವ ಗೌರಮ್ಮ ದೇವಿಗೆ ಮೂಗುತಿ ತೊಡಿಸಿದಾಗ ಆ ದೇವಿಗೆ ಶಕ್ತಿ ಬರುತ್ತದೆಯಂತೆ. ಅದೇ ರೀತಿ ೯ ದಿನಗಳ ಕಾಲ ಪೂಜಾ ಕೈಂಕರ್ಯಗಳನ್ನು ಮಾಡಿಕೊಂಡು ೯ನೇ ದಿನ ದೇವಿಯನ್ನು ಕಲ್ಯಾಣಿಗೆ ಸಮರ್ಪಿಸುವಾಗ ಅದೇ ಕೋಡಿಮಠದ ಶ್ರೀಗಳು ಮೂಗುತಿ ತೆಗೆಯುವಾಗ ದೇವಿಯ ಕಣ್ಣಲ್ಲಿ ನೀರು ಬರುತ್ತಿತ್ತಂತೆ ಎಂಬುದು ಜನರು ಹೇಳುವ ನಿಜವಾದ ಕಣ್ಣಿಂದ ಕಂಡ ಹಾಗೂ ಹಿಂದೂ ಧರ್ಮದ ಶಕ್ತಿ ದೇವಿಯ ಮಹಿಮೆ ಎಂಬುದು ವಾಡಿಕೆಯಿಂದ ಬಂದಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದರು.
ವೈಶಾಖ ಮಾಸ ಕೃಷ್ಣ ಪಕ್ಷ ಚೌತಿಯಂದು ಬೆಳಗ್ಗೆ ಗ್ರಾಮದ ಎಲ್ಲ ಜನರು ಸೇರಿಕೊಂಡು ಗ್ರಾಮಕ್ಕೆ ಗೌರಮ್ಮನನ್ನು ತರುವ ಕಾರ್ಯಕ್ರಮಕ್ಕೆ ಬೀದಿ ಬೀದಿಗಳ ರಸ್ತೆಗಳನ್ನೆಲ್ಲ ಸ್ವಚ್ಚ ಮಾಡಿ ರಂಗೋಲಿ ಬಿಡಿಸಿ ಮಾವಿನ ಸೊಪ್ಪಿನ ತೋರಣ ಕಟ್ಟಿ ಬಾಳೆ ಕಂಬಗಳನ್ನು ನೆಟ್ಟು ಗೌರಮ್ಮ ದೇವಿಯನ್ನು ಗ್ರಾಮಕ್ಕೆ ಸ್ವಾಗತ ಮಾಡಿಕೊಂಡು ಗ್ರಾಮದ ಪ್ರಮುಖ ಸ್ಥಳವಾದ ಗೌರಮ್ಮದೇವಿ ದೇವಾಲಯದ ಆವರಣದಲ್ಲಿ ಪ್ರತಿಷ್ಟಾಪನೆ ಮಾಡಿ ನಂತರ ೯ ದಿನಗಳ ಕಾಲ ಪ್ರತಿ ದಿನ ಪೂಜಾ ಕೈಂಕರ್ಯಗಳನ್ನು ಮಾಡಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಈ ವೈಭವವನ್ನು ನೋಡಲು ರಾಜ್ಯದ ಮೂಲೆ ಮೂಲೆಯಿಂದ ಜನ ದೇವಿಯ ದರ್ಶನ ಮಾಡಲು ಸಾಲು ಗಟ್ಟಿ ಬರುತ್ತಾರೆ.
ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಗ್ರಾಮದ ಜನರಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಹಿಂದಿನ ಸಂಪ್ರದಾಯ ಮರೆತು ಕೇವಲ ಆಡಂಬರಕ್ಕೆ ಮೂಲ ಗೌರಮ್ಮನ ಸ್ಥಳವನ್ನು ಕೇವಲ ನಂದಾದೀಪ ಹಚ್ಚಲು ಮಾತ್ರ ಬಳಸಲಾಗಿದ್ದು, ಉಳಿದ ಕಡೆ ಅಂದರೆ ಶೃಷ್ಟಿ ಗೌರಮ್ಮನನ್ನು ಸ್ಥಾಪಿಸಿಕೊಂಡು ಕೋಡಿಶ್ರೀಗಳಿಂದ ಮೂಗೂತಿ ಇಲ್ಲದೇ ಕೇವಲ ಇಲ್ಲಿನ ಸ್ಥಳೀಕರಿಂದ ಗೌರಮ್ಮ ದೇವಿಯನ್ನು ಪ್ರತಿಷ್ಟಾಪನೆ ಮಾಡಿಕೊಂಡು ಇತ್ತೀಚೆಗಷ್ಟೆ ಅಂದರೆ ೨-೩ ವರ್ಷಗಳಿಂದ ಆಡಂಬರದ ಗೌರಮ್ಮ ದೇವಿಯನ್ನು ಮಾಡುತ್ತಿರುವುದು ಗ್ರಾಮದ ಜನರಿಗೆ ಭಕ್ತಿಯ ನಿಷ್ಠೆ ಮೇಲೆ ಅಪನಂಬಿಕೆ ಉಂಟು ಮಾಡಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ. ಅಷ್ಟೇ ಅಲ್ಲದೆ ಪ್ರತಿ ವರ್ಷ ಹೆಚ್ಚಾಗುತ್ತಿದ್ದು ಜನತೆ ಇತ್ತೀಚೆಗೆ ಭಕ್ತಾಧಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅಲ್ಲದೇ ಅಲ್ಲಿನ ದೇವಸ್ಥಾನದ ನಿರ್ವಹಣೆ ಕೂಡಾ ತಪ್ಪಿದೆ ಎಂಬುದು ಅಲ್ಲಿನ ಸ್ಥಳೀಕರ ಅಭಿಪ್ರಾಯ.
ಈ ರೀತಿ ಶೃಷ್ಠಿ ಗೌರಮ್ಮ ಬಂದ ಮೇಲೆ ಕೋಡಿ ಶ್ರೀಗಳನ್ನು ಮರೆತ ವರ್ಷ ಮೊದಲಿಗೆ ಆರತಿ ಬಾನ ಮಾಡುವ ವೇಳೆ ಬೆಂಕಿ ಕಾಣಿಸಿಕೊಂಡು ೫-೧೦ ಮಹಿಳೆಯರ ಸೀರೆ ಸುಟ್ಟಿದೆಯಂತೆ ೨ನೇ ವರ್ಷ ಕಲ್ಯಾಣಿಯೊಳಗೆ ಗೌರಮ್ಮ ವಿಸರ್ಜನೆ ವೇಳೆ ಜನಜಂಗುಳಿಯಿಂದ ಒಬ್ಬರಿಗೆ ತಲೆಗೆ ಪೆಟ್ಟಾಗಿ ರಕ್ತಸ್ರಾವವಾಗಿದೆಯಂತೆ ಹಾಗೂ ಕಳೆದ ವರ್ಷ ಗ್ರಾಮದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಯಿತಂತೆ ಈ ರೀತಿ ೩ ಬಾರಿಯೂ ಸೃಷ್ಟಿ ಗೌರಮ್ಮ ಬಂದ ಮೇಲೆ ಪ್ರತಿ ವರ್ಷ ಒಂದಿಲ್ಲೊಂದು ಅಪಶಕುನಗಳು ನಡೆಯುತ್ತಲೇ ಬಂದಿದೆಯಂತೆ ಎಂಬುದು ಸಾರ್ವಜನಿಕರ ಮಾತಾಗಿದೆ. ಅಲ್ಲದೇ ಈ ವರ್ಷವೂ ಕೂಡಾ ಹಾರನಹಳ್ಳಿಯ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ಮಹಾಸ್ವಾಮಿಗಳನ್ನು ಮರೆತ ಮಾಡಾಳು ಜನತೆಗೆ ಅದ್ಯಾವಾ ಸೂತಕದ ಚಾಯೇ ಬೀಳುತ್ತೋ, ಅಥವಾ ಗೌರಮ್ಮನ ದಿವ್ಯ ದೃಷ್ಟಿಯಿಂದ ಗ್ರಾಮಕ್ಕೆ ಅನಾಹುತಾ ಕಾದಿದ್ಯೋ, ನಾಡಿನ ಜನತೆ ಕಾದು ನೋಡುವಂತಾಗಿದೆ.