ಸಂಪೂರ್ಣ ವಿಮೋಚನೆ ಸಿಕ್ಕಿಲ್ಲ: ಪ್ರಿಯಾಂಕ್ ಖರ್ಗೆ

ಚಿತ್ತಾಪೂರ:ಸೆ.18: ಹೈದ್ರಾಬಾದ್ ನವಾಬನಿಂದ ವಿಮೋಚನೆ ಸಿಕ್ಕಿತು ಆದರೆ ಈ ಪ್ರಾಂತ್ಯದ ಜನರಿಗೆ, ಬಡತನ, ನಿರುದ್ಯೋಗ, ಅಸ್ಪೃಶ್ಯತೆ, ಬ್ರಷ್ಟಾಚಾರ ಇವುಗಳಿಂದ ಇನ್ನೂ ನಮಗೆ ವಿಮೋಚನೆ ಸಿಕ್ಕಿಲ್ಲ ಎಂದು ಶಾಸಕ ಪ್ರಿಯಾಂಕ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ತಹಶೀಲ್ ಆವರಣದಲ್ಲಿ ತಾಲೂಕಾ ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ,ಹಾಗೂ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹೈದರಾಬಾದ್ ಕರ್ನಾಟಕ ಎಂಬ ಹೆಸರು ಬದಲಾಯಿಸಿ ಕಲ್ಯಾಣ ಕರ್ನಾಟಕ ಎಂದು ಮಾಡಿದರೆ ಅಭಿವೃದ್ಧಿ ಆಗದು ಈ ಭಾಗದ ಅಭಿವೃದ್ಧಿ ಆದರೆ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಅರ್ಥವಿರುತ್ತದೆ ಎಂದರು.

ಕಲೆ ವಾಸ್ತುಶಿಲ್ಪ ಹಾಗೂ ಇತಿಹಾಸ ಉಳಿದಿದೆ ಎಂದರೆ ಅದು ವಿಶ್ವಕರ್ಮದವರ ಪಾತ್ರ ಬಹುಮುಖ್ಯವಿದೆ ಎಂದು ಹೇಳಿ ಈ ಸಮಾಜ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರಿ ಜಾಗ ಹಾಗೂ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಉಮಾಕಾಂತ ಹಳ್ಳೆ, ಗ್ರೇಡ್ 2 ತಹಸೀಲ್ದಾರ್ ಅಮಿತ್ ಕುಲಕರ್ಣಿ, ತಾಪಂ ಇಓ ನೀಲಗಂಗಾ ಬಬಾಲಾದ್, ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ. ಉಪಾಧ್ಯಕ್ಷೆ ಶೃತಿ ಪೂಜಾರಿ, ಸಿಪಿಐ ಪ್ರಕಾಶ ಯಾತನೂರ, ಆನಂದ ಪಾಟೀಲ, ಬಸವರಾಜ ಬಳ್ಳೂಂಡಗಿ, ಶಂಕರ ಪಂಚಾಳ, ಪ್ರಹ್ಲಾದ್, ವೇದಿಕೆಯ ಮೇಲೆ ಹಾಸೀನರಾಗಿದ್ದರು. ಪುರಸಭೆ ಚುನಾಯಿತ ಸದಸ್ಯರು,ಗಣ್ಯ ವ್ಯಕ್ತಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. ನಿರೂಪಣೆಯನ್ನು ಸಂತೋಷ ಕುಮಾರ ಶಿರನಾಳ, ಸಿದ್ದಣ ಅಣಬಿ ವಂದನೆಯನ್ನು ನೆರವೇರಿಸಿದರು.