ಸಂಪೂರ್ಣ ಚಾ.ನಗರ ಚುನಾವಣೆ ಬಹಿಷ್ಕಾರ: ವಾಟಾಳ್

ಚಾಮರಾಜನಗರ: ಮೇ.11:- ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ರಾತ್ರೋರಾತ್ರಿ ಮತದಾರರಿಗೆ ಹಣ ಹಂಚಿಕೆ ಮಾಡುವ ಮೂಲಕ ಭ್ರಷ್ಟಾಚಾರ ಎಸಗಿದೆ ಈ ಕಾರಣದಿಂದ ಚುನಾವಣಾ ಬಹಿಷ್ಕಾರ ಮಾಡುವುದಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್‍ನಾಗರಾಜ್ ಹೇಳಿದರು.
ನಗರದ ಡಾ,ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ವಾಟಾಳ್‍ನಾಗರಾಜ್ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದೇನೆ. ಈ ಚುನಾವಣೆಯನ್ನು ನಾನು ಬಹಿಷ್ಕಾರ ಮಾಡಿದ್ದೇನೆ. ಬೂತ್ ನಮ್ಮ ಕಡೆಯವರು ಯಾರು ಕೂತಿಲ್ಲ. ಪ್ರಚಾರ ಮಾಡುವುದುಕ್ಕೆ ನಮ್ಮ ಯಾರು ಹೋಗಿಲ್ಲ. ನಮ್ಮ ಕಡೆಯವರು ಏಜೆಂಟ್ ಹಾಕಿಲ್ಲ ಸಂಪೂರ್ಣ ಈ ಚುನಾವಣೆಯನ್ನು ಬಹಿಷ್ಕಾರ ಮಾಡಿರುವುದಾಗಿ ವಾಟಾಳ್‍ನಾಗರಾಜ್ ತಿಳಿಸಿದರು.
ಇದು ಚುನಾವಣೆಯಲ್ಲಿ ಸಂಪೂರ್ಣ ವ್ಯಾಪಾರ ಆಯಿತು. ಮಂಗಳವಾರ ರಾತ್ರೋರಾತ್ರಿ ಕ್ಷೇತ್ರದ ಪ್ರತಿ ಮತದಾರರಿಗೆ ಬಿಜೆಪಿ, ಕಾಂಗ್ರೆಸ್ ಹಣಕೊಟ್ಟಿದ್ದು, ಸಾವಿರ ರೂಪಾಯಿ, ಸಾವಿರದ ಐನೂರು, ಎರಡು ಸಾವಿರ ರೂ. ಐನೂರು ರೂಪಾಯಿ ಹಾಗೂ ತಮ್ಮ ಮನೋಇಚ್ಚೆಬಂದಂತೆ ಹಣ ಕೊಟ್ಟಿದ್ದಾರೆ, ನಾವು ಯಾರಿಗೂ ಒಂದು ನಯಾಪೈಸೆ ಕೊಟ್ಟಿಲ್ಲ. ಚುನಾವಣೆ ಪ್ರಜಾಪ್ರಭುತ್ವದ ಆಧಾರದ ಮೇಲೆ ಪ್ರಾಮಾಣಿಕ ಚುನಾವಣೆ ಆಗಬೇಕು. ಚುನಾವಣೆಯ ಭ್ರಷ್ಟ ವ್ಯವಸ್ಥೆ ಆಗಬಾರದು. ಭ್ರಷ್ಟಾಚಾರದಿಂದ ಚುನಾವಣೆಯಾದರೆ ಅತ್ಯಂತ ಅಗೌರವ ಆಗುತ್ತದೆ ಎಂದರು.
ಯಾವ ಊರಲ್ಲೂ ಒಬ್ಬ ಚುನಾವಣಾಧಿಕಾರಿ ಇಲ್ಲ : ಕ್ಷೇತ್ರದಲ್ಲಿ ದೊಡ್ಡಮಟ್ಟದಲ್ಲಿ ಚನಾವಣಾ ಅಕ್ರಮಗಳು ನಡೆಯುತ್ತಿದ್ದರೂ ಯಾವ ಊರಲ್ಲೂ ಒಬ್ಬ ಚುನಾವಣಾಧಿಕಾರಿಯೂ ಇಲ್ಲ. ರಸ್ತೆಯಲ್ಲೂ ಇಲ್ಲ. ಒಂದು ಕಡೆ ನೂರುಜನರ ತಂಡ ಹಣ ಹಂಚಿಕೆ ಮಾಡುತ್ತಿದೆ. ಅದನ್ನು ನಿಯಂತ್ರಣ ಮಾಡುವವರಿಲ್ಲ. ಮನೆಮನೆಗೆ ಹಣ ಹಂಚಿಕೆ ಮಾಡಿದ್ದಾರೆ. ಚಾಮರಾಜನಗರಕ್ಕೆ ಯಾವ ಮೂಲೆಯಿಂದ ಹಣ ಬಂದರೂ ಹೇಳುವವರಿಲ್ಲ, ಕೇಳುವವರಿಲ್ಲ. ಸುಮ್ಮನೆ ಚಕ್ ಪೆÇ?ಸ್ಟ್ಗಳಿದ್ದು ಅವು ಸ್ಮಶಾನ ರೀತಿಯಲ್ಲಿವೆ. ಒಂದು ಶಾಸನಸಭೆ ಸ್ಥಾನವನ್ನು ಪಡೆಯಲೇ ಎಂದು ವ್ಯವಸ್ಥಿವಾದ ಚಿಂತನೆ ಮಾಡಿ ವ್ಯಾಪಾರ ಮಾಡುತ್ತಿರುವುದು ಘೋರ ಅನ್ಯಾಯವಾಗಿದೆ ಎಂದರು.
ಈ ಚುನಾವಣೆಯ ಫಲಿತಾಂಶವ್ನನು ಒಪ್ಪುವುದಿಲ್ಲ. ನಾನು ಕೂಡ ಈ ಚುನಾವಣೆಯಲ್ಲಿ ಭಾಗವಹಿಸಿಲ್ಲ. ಬೂತಗಳಿಗೆ ನಾನು ಹೋಗಿಲ್ಲ. ನಮ್ಮವರ ಒಬ್ಬರನ್ನು ಚುನಾವಣೆಯ ಏಜೆಂಟ್ ಆಗಿ ಕೂರಿಸಿಲ್ಲ. ಯಾರಿಗೂ ನೋಟಿಸ್ ಕೊಟ್ಟಿಲ್ಲ. ನಾಟಕೀಯವಾಗಿ ಚುನಾವಣಾ ಅಕ್ರಮ ನಾಟಕೀಯವಾಗಿದೆ. ಸಂಪೂರ್ಣವಾಗಿ ಚಾಮರಾಜನಗರದ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗಿದೆ, ಇದಕ್ಕೆ ಚುನಾವಣೆಯ ಆಯೋಗವೇ ಹೊಣೆಯಾಗುತ್ತದೆ, ಇದಕ್ಕೆ ಚುನಾವಣೆ ಆಯೋಗ ಪ್ರಾಮಾಣಿಕವಾಗಿ ಉತ್ತರಿಸಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು,
ಪಿಎಂ, ಸಿಎಂ, ಸಚಿವರುಗಳು ಚುನಾವಣೆಯಲ್ಲಿ ಭಾಗವಹಿಸಬೇಕಾದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು : ಇಂತಹ ಚುನಾವಣೆಗೆ ಯಾವುದೇ ಕಾರಣಕ್ಕೂ ಪ್ರಧಾನಮಂತ್ರಿ ಅಥವಾ ಗೃಹ ಮಂತ್ರಿ ಹಾಗೂ ಸಚಿವರು ಬರಬೇಕಾದರೆ. ಮಾದಲು ರಾಜೀನಾಮೆ ಕೊಡಲೇಬೇಕು. ಸಾಮಾನ್ಯರ ರೀತಿಯಲ್ಲಿ ಚುನಾವಣೆಗಳಲ್ಲಿ ಪ್ರಧಾನಿ, ಸಿಎಂ, ಸಚಿವರು ಭಾಗವಹಿಸುವುದು ದುರುಪಯೋಗ ಪರಮಾವಧಿಯಾಗಿದೆ. ಈ ಚುನಾವಣೆಯಲ್ಲಿ ಭಾಗವಹಿಸಬೇಕಾದರೆ ಪ್ರಧಾನಿ, ಸಿಎಂ, ಸಚಿವರು ತಮ್ಮ ಸ್ಥಾನಗಳಲ್ಲಿ ರಾಜೀನಾಮೆ ನೀಡಿ ಭಾಗವಹಿಸಬೇಕು. ಅಧಿಕಾರದಲ್ಲಿದ್ದು ಭಾಗವಹಿಸುವುದು ಅಧಿಕಾರಿಗಳು ದುರುಪಯೋಗವಾಗುತ್ತದೆ ಈ ಚುನಾವಣೆಯಲ್ಲಿ ತಮ್ಮ ಅಧಿಕಾರಿವನ್ನು ಬಳಸಿ ಭ್ರಷ್ಟಾಚಾರ ಎಸಗಿದ್ದಾರೆ. ಚುನಾವಣಾಧಿಕಾರಿ ಶೇಷಣ್ ಅವರು ಪ್ರಾಮಾಣಿಕವಾಗಿದ್ದು, ಪ್ರಧಾನಿ ಅವರನ್ನು ಎದುರಿಸುವ ರೀತಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿದರು ಅವರ ಅವಧಿ ಪೂರ್ಣವಾದ ಮೇಲೆ ಚುನಾವಣಾ ಆಯೋಗ ಸತ್ತು ಹೋಗಿದ್ದು, ಒಬ್ಬರು ಇದ್ದ ಸ್ಥಳಕ್ಕೆ ಮೂರು ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದು ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಅವರ ಇಚ್ಚೆಗನುಸಾರ ನೇಮಕ ಮಾಡಲಾಗಿದೆ ಎಂದರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಮತದಾರರಿಗೆ ಹಣ ಹಂಚಿಕೆ ಮಾಡಿ ಸಂಪೂರ್ಣ ಇದು ಚುನಾವಣೆ ವ್ಯಾಪಾರವಾಗಿರುವುದರಿಂದ ಈ ಚುನಾವಣೆಯಲ್ಲಿ ನಾವು ಭಾಗವಹಿಸುವುದು ಸರಿಯಲ್ಲ ಎಂದು ಈ ಚುನಾವಣೆಯನ್ನು ಸಂಪೂರ್ಣವಾಗಿ ಬಹಿಷ್ಕಾರ ಮಾಡಲಾಗಿದೆ ಎಂದರು.