ಸಂಪುಟ ಸಂಕಟ ವರಿಷ್ಠರಿಗೆ ಸವಾಲು

ನಾಳೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸಿದ್ದರಾಮಯ್ಯ ಅವರು ಕುಮಾರ ಕೃಪಾದಲ್ಲಿರುವ ಮನೆ ಮುಂಭಾಗ ನೆರೆದಿದ್ದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳತ್ತ ಕೈ ಬೀಸುತ್ತಿರುವುದು.

ಬೆಂಗಳೂರು,ಮೇ೧೯:ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಆಯ್ಕೆ ಕಸರತ್ತು ಮುಗಿಯುತ್ತಿದ್ದಂತೆ ಸಂಪುಟ ರಚನೆಯ ಸಂಕಷ್ಟ ಎದುರಾಗಿದ್ದು, ಕಾಂಗ್ರೆಸ್ ವರಿಷ್ಠರಿಗೆ ನೂತನ ಸಚಿವರ ಆಯ್ಕೆ ಸವಾಲಾಗಿದೆ. ಸಂಪುಟ ರಚನೆಯ ಬಗ್ಗೆ ವರಿಷ್ಠರ ಜತೆ ಚರ್ಚೆ ನಡೆಸಲು ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ದೆಹಲಿಗೆ ತೆರಳಿದ್ದಾರೆ.
ಯಾರಿಗೆಲ್ಲ ಸಚಿವರನ್ನಾಗಿ ಮಾಡಬೇಕು ಎಂಬ ಪಟ್ಟಿಯೊಂದಿಗೆ ಸಿದ್ದರಾಮಯ್ಯ ಹಾಗೂ ಡಿಕೆಶಿ ದೆಹಲಿಗೆ ತೆರಳಿದ್ದು, ಇಂದು ವರಿಷ್ಠರ ಜತೆ ಚರ್ಚೆ ನಡೆಸಿ ಸಚಿವರಾಗುವವರ ಹೆಸರನ್ನು ಅಂತಿಮಗೊಳಿಸುವರು.ಸಚಿವರ ಪಟ್ಟಿ ಇಂದು ಬಹುತೇಕ ಅಂತಿಮಗೊಳ್ಳಲಿದ್ದು, ನಾಳೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಜತೆ ಕೆಲವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವರು.ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇವರಿಬ್ಬರು ತಮ್ಮ ಆಪ್ತರಿಗೆ ಸಚಿವ ಸ್ಥಾನ ಹಾಗೂ ಪ್ರಬಲ ಖಾತೆ ದೊರಕಿಸಲು ಹೈಕಮಾಂಡ್ ಮಟ್ಟದಲ್ಲಿ ಎಲ್ಲ ರೀತಿಯ ಪ್ರಂiiತ್ನ ನಡೆಸುತ್ತಿದ್ದು, ಯಾರೆಲ್ಲ ಸಚಿವರಾಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.ಜಾತಿ, ಪ್ರಾದೇಶಿಕತೆ ಎಲ್ಲವನ್ನೂ ಮುಂದಿಟ್ಟು ಈ ಇಬ್ಬರು ನಾಯಕರು ತಮ್ಮ ಆಪ್ತರಿಗೆ ಸಚಿವ ಪಟ್ಟಕ್ಕಾಗಿ ನಡೆಸಿರುವ ಪ್ರಯತ್ನಗಳು ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿವೆ.ಶಾಸಕಾಂಗ ಪಕ್ಷದ ನಾಯಕತ್ವದ ಕಗ್ಗಂಟನ್ನು ಪರಿಹರಿಸಲು ೪ ದಿನ ಕಸರತ್ತು ನಡೆಸಿದ್ದ ವರಿಷ್ಠರಿಗೀಗ ಸಂಪುಟ ರಚನೆಯ ಸಂಕಷ್ಟಗಳು ತೆರೆದುಕೊಂಡಿವೆ. ನಾಯಕತ್ವದ ಕಗ್ಗಂಟನ್ನು ಪರಿಹರಿಸಿದ ಮಾದರಿಯಲ್ಲೇ ಸಂಪುಟ ರಚನೆಯ ಕಗ್ಗಂಟಿಗೂ ಪರಿಹಾರ ದೊರಕಿಸಿ ಎಲ್ಲವೂ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ವರಿಷ್ಠರು ತಮ್ಮದೇ ಆದ ಸೂತ್ರ ಸಿದ್ಧಮಾಡಿಕೊಂಡಿದ್ದಾರೆ. ಇಂದು ರಾತ್ರಿಯೊಳಗೆ ಸಂಪುಟ ರಚನೆಯ ಕಸರತ್ತುಗಳು ಪೂರ್ಣಗೊಳ್ಳಲಿದೆ.ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವರಿಷ್ಠರ ಸೂತ್ರಕ್ಕೆ ಬದ್ಧರಾದರೆ ನಾಳೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಜತೆ ೨೮ ಸಚಿವರು ಪ್ರಮಾಣವಚನ ಸ್ವೀಕರಿಸುವರು. ಒಂದು ವೇಳೆ ಸಚಿವರ ಆಯ್ಕೆ ಕಗ್ಗಂಟಾದರೆ ೧೪ ಸಚಿವರಷ್ಟೇ ಪ್ರಮಾಣವಚನ ಸ್ವೀಕರಿಸಲಿದ್ದು, ಉಳಿದವರಿಗೆ ೨ನೇ ಹಂತದ ಸಂಪುಟ ವಿಸ್ತgರಣೆಯಲ್ಲಿ ಅವಕಾಶ ಸಿಗಬಹುದು. ಎಷ್ಟು ಜನರನ್ನು ಸಚಿವರನ್ನಾಗಿಸಬೇಕು, ಯಾರಿಗೆ ಯಾವ ಖಾತೆ ನೀಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ.
ಜಾತಿ-ಪ್ರಾದೇಶಿಕತೆ ಸಂಪುಟ ರಚನೆಯ ಮಾನದಂಡವಾಗುವುದರಿಂದ ಕೆಲ ಹಿರಿಯ ಶಾಸಕರಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆಗಳಿವೆ.

ಖರ್ಗೆ ನಿವಾಸಕ್ಕೆ ಸಚಿವಾಕಾಂಕ್ಷಿಗಳ ದೌಡು, ಲಾಬಿ
ಸಂಪುಟ ರಚನೆಯ ಕಸರತ್ತುಗಳು ವರಿಷ್ಠರ ಅಂಗಳ ತಲುಪಿರುವಾಗಲೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಚಿವಾಕಾಂಕ್ಷಿ ಶಾಸಕರುಗಳು ದೆಹಲಿಗೆ ತೆರಳಿದ್ದು, ದೆಹಲಿಯಲ್ಲಿ ಬೀಡುಬಿಟ್ಟು ಹೈಕಮಾಂಡ್ ಮಟ್ಟದಲ್ಲಿ ತಮಗಿರುವ ಪ್ರಭಾವ ಬಳಸಿ ಸಚಿವ ಪಟ್ಟ ಪಡೆಯಲು ಲಾಬಿ ನಡೆಸಿದ್ದಾರೆ.
ಕಾಂಗ್ರೆಸ್‌ನ ೪೦ಕ್ಕೂ ಹೆಚ್ಚು ಶಾಸಕರು ದೆಹಲಿಯಲ್ಲಿದ್ದು, ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ. ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳುವ ಮೊದಲೇ ಸಚಿವಾಕಾಂಕ್ಷಿ ಶಾಸಕರುಗಳು ದೆಹಲಿಗೆ ಹೋಗಿದ್ದು, ಕಾಂಗ್ರೆಸ್‌ನಲ್ಲಿರುವ ತಮ್ಮ ಗಾಡ್‌ಫಾದರ್‌ಗಳಿಗೆ ಸಚಿವ ಸ್ಥಾನಕ್ಕಾಗಿ ದುಂಬಾಲು ಬಿದ್ದಿದ್ದಾರೆ.
ದೆಹಲಿಯಲ್ಲಿರುವ ಸಚಿವಾಕಾಂಕ್ಷಿ ಶಾಸಕರುಗಳಾದ ಎಸ್.ಎಸ್ ಮಲ್ಲಿಕಾರ್ಜುನ್, ರಾಜಣ್ಣ, ವಿನಯ್‌ಕುಲಕರ್ಣಿ, ಅಜಯ್‌ಸಿಂಗ್, ಶಿವರಾಜ್ ತಂಗಡಗಿ, ಯು.ಟಿ. ಖಾದರ್ ಸೇರಿದಂತೆ ಸಾಲು ಸಾಲು ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನುಭೇಟಿ ಮಾಡಿದ್ದಾರೆ.

ಸಂಭಾವ್ಯ ಸಚಿವರ ಪಟ್ಟಿ
ಎಂ.ಬಿ. ಪಾಟೀಲ್
ಶಿವಾನಂದ ಪಾಟೀಲ್
ಡಾ. ಜಿ. ಪರಮೇಶ್ವರ್.
ಕೆ.ಹೆಚ್. ಮುನಿಯಪ್ಪ
ಬಿ.ಕೆ. ಹರಿಪ್ರಸಾದ್
ರಾಮಲಿಂಗಾರೆಡ್ಡಿ
ಕೆ.ಜೆ ಜಾರ್ಜ್
ಶಾಮನೂರು ಶಿವಶಂಕರಪ್ಪ/ಎಸ್.ಎಸ್ ಮಲ್ಲಿಕಾರ್ಜುನ
ಆರ್.ವಿ ದೇಶ್‌ಪಾಂಡೆ

ಕೃಷ್ಣಬೈರೇಗೌಡ
ಹೆಚ್.ಕೆ ಪಾಟೀಲ್
ಯು.ಟಿ. ಖಾದರ್
ಜಮೀರ್‌ಅಹ್ಮದ್‌ಖಾನ್
ಎನ್.ಎ. ಹ್ಯಾರೀಸ್/ಸಲೀಂ ಅಹ್ಮದ್
ಸತೀಶ್ ಜಾರಕಿಹೊಳಿ
ಡಾ. ಹೆಚ್.ಸಿ ಮಹದೇವಪ್ಪ
ಶರಣಪ್ರಕಾಶ್ ಪಾಟೀಲ್
ಈಶ್ವರ ಖಂಡ್ರೆ
ಅಜಯ್‌ಸಿಂಗ್

ದಿನೇಶ್‌ಗುಂಡೂರಾವ್
ಮಧುಬಂಗಾರಪ್ಪ
ಪ್ರಿಯಾಂಕ್‌ಖರ್ಗೆ
ಬಸವರಾಜರಾಯರೆಡ್ಡಿ
ವಿನಯ್‌ಕುಲಕರ್ಣಿ
ಬಿ.ಕೆ. ಸಂಗಮೇಶ್
ಆರ್.ಬಿ. ತಿಮ್ಮಾಪುರ
ಎಂ. ಕೃಷ್ಣಪ್ಪ/ಪ್ರಿಯಾಕೃಷ್ಣ
ಸಂತೋಷ್‌ಲಾಡ್
ಲಕ್ಷ್ಮಿ ಹೆಬ್ಬಾಳ್ಕರ್
ಕೊತ್ತೂರು ಮಂಜುನಾಥ
ಕೆ.ಎಂ ರಾಜಣ್ಣ
ಭೈರತಿ ಸುರೇಶ್
ರಾಘವೇಂದ್ರ ಯತ್ನಾಳ್
ಚೆಲುವರಾಯ ಸ್ವಾಮಿ
ತನ್ವೀರ್‌ಸೇಠ್
ಹಂಪನಗೌಡ ಬಾದರ್ಲಿ