ಸಂಪುಟ ವಿಸ್ತರಣೆ ಬಿಎಸ್‌ವೈಗೆ ಸ್ವಾತಂತ್ರ್ಯ

ಬೆಂಗಳೂರು,ನ.೧೪- ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ, ಈ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ನೂರಕ್ಕೆ ನೂರು ಮುಕ್ತ ಸ್ವಾತಂತ್ರ್ಯವಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಸಚಿವ ಸಂಪುಟ ವಿಸ್ತರಿಸಬೇಕೊ, ಪುನಾರಚಿಸಬೇಕೊ ಎಂಬುದೆಲ್ಲ ಮುಖ್ಯಮಂತ್ರಿUಳ ವಿವೇಚನೆಗೆ ಸೇರಿದ್ದು, ಹೈಕಮಾಂಡ್ ಯಡಿಯೂರಪ್ಪನವರಿಗೆ ನೂರಕ್ಕೆ ನೂರರಷ್ಟು ಸ್ವಾತಂತ್ರ ನೀಡಿದೆ ಎಂದರು.
ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸಂಬಂಧ ಯಡಿಯೂರಪ್ಪನವರು ವರಿಷ್ಠರೊಡನೆ ಚರ್ಚಿಸಿ ತೀರ್ಮಾನ ಮಾಡುತ್ತಾರೆ. ಯಾರನ್ನು ಕೈ ಬಿಡಬೇಕು ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬುದನ್ನು ಮುಖ್ಯಮಂತ್ರಿಗಳೇ ನಿರ್ಧರಿಸುತ್ತಾರೆ ಎಂದರು.