ಸಂಪುಟ ವಿಸ್ತರಣೆಗೆ ಸಿಎಂ ಕಸರತ್ತು

ಬೆಂಗಳೂರು,ನ.೧೭-ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಒತ್ತಡಗಳು ಹೆಚ್ಚಿರುವ ಹಿನ್ನೆಲೆಂiiಲ್ಲಿ ಮುಖ್ಯಮಂತ್ರಿ ಯಡಿಯೂರ
ಪ್ಪರವರು ನಾಳೆ ಇಲ್ಲವೆ ನಾಡಿದ್ದು ದೆಹಲಿಗೆ ತೆರಳಿ ವರಿಷ್ಠರೊಡನೆ ಸಮಾಲೋಚನೆ ನಡೆಸಿ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡಲು ಮುಂದಾಗಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪರವರು ದೆಹಲಿ ಭೇಟಿಯ ಹಿನ್ನೆಲೆಯಲ್ಲಿ ನಾಳೆ ಸಚಿವ ಸಂಪುಟ ಸಭೆ ಕರೆದಿದ್ದು, ಸಚಿವ ಸಂಪುಟ ಸಭೆಯ ನಂತರ ದೆಹಲಿಗೆ ತೆರಳುವರು ಎಂದು ಹೇಳಲಾಗಿದೆಯಾದರೂ ವರಿಷ್ಠರಿಂದ ಇನ್ನು ಬುಲಾವ್ ಬಾರದ ಕಾರಣ ಮುಖ್ಯಮಂತ್ರಿಗಳು ನಾಳೆಯೇ ದೆಹಲಿಗೆ ತೆರಳುತ್ತಾರಾ ಎಂಬುದು ಖಚಿತವಾಗಿಲ್ಲ.
ವರಿಷ್ಠರ ಕರೆಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಕಾಯುತ್ತಿದ್ದು ವರಿಷ್ಠರ ಕರೆ ಬಂದ ತಕ್ಷಣವೆ ಅವರು ದೆಹಲಿಗೆ ತೆರಳಲಿದ್ದು, ಯಾವುದೇ ಕ್ಷಣದಲ್ಲಿ ದೆಹಲಿಗೆ ಬರುವಂತೆ ವರಿಷ್ಠರು ಕರೆ ಮಾಡುವ ಸಾಧ್ಯತೆ ಇದ್ದು, ಹಾಗಾಗಿ ಮುಖ್ಯಮಂತ್ರಿ ಯಡಿಯೂರಪ್ಪರವರು ದೆಹಲಿ ಭೇಟಿಗೆ ಸಿದ್ದರಾಗಿದ್ದು, ನಾಳೆ ಇಲ್ಲವೆ ನಾಡಿದ್ದು, ದೆಹಲಿಗೆ ಹೋಗುವ ಸಾಧ್ಯತೆಗಳು ಹೆಚ್ಚಿವೆ.
ಮುಖ್ಯಮಂತ್ರಿ ಯಡಿಯೂರಪ್ಪರವರು ಸಚಿವ ಸಂಪುಟವನ್ನು ಪುನಾರಚಿಸಲು ಬಯಸಿದ್ದು, ನಾಲ್ಕೈದು ಸಚಿವರನ್ನು ಕೈಬಿಟ್ಟು ಖಾಲಿ ಇರುವ ಸ್ಥಾನಗಳೂ ಸೇರಿದಂತೆ, ಏಳೆಂಟು ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಬಯಸಿದ್ದಾರೆ.ಆದರೆ ಸಂಪುಟ ಪುನಾರಚನೆಯಾಗಲಿದೆಯೇ ಇಲ್ಲವೆ ವಿಸ್ತರಣೆಯಾಗಲಿದೆಯೇ ಎಂಬುದು ವರಿಷ್ಠರ ಭೇಟಿ ನಂತರವೇ ಸ್ಪಷ್ಟ ಚಿತ್ರಣ ಹೊರಬೀಳಲಿದೆ.
ಉಪ ಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಒಂದು ವಾರವಾದರೂ
ಸಂಪುಟ ವಿಸ್ತರಣೆ ಇನ್ನು ಸಾಧ್ಯವಾಗಿಲ್ಲ.ವರಿಷ್ಠರು ಬಿಹಾರ ವಿದ್ಯಮಾನದಲ್ಲಿ ಬ್ಯುಸಿಯಾಗಿದ್ದರಿಂದ ಮುಖ್ಯಮಂತ್ರಿಗಳ ದೆಹಲಿ ಭೇಟಿ ತಡವಾಗಿತ್ತು, ಈಗ ಬಿಹಾರದಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎಲ್ಲ ರಾಜಕೀಯ ಗೊಂದಲಗಳಿಗೂ ತೆರೆ ಬಿದ್ದಿದೆ. ಹಾಗಾಗಿ ಯಡಿಯೂರಪ್ಪನವರು ವರಿಷ್ಠರ ಭೇಟಿಗೆ ಸಮಯ ಕೋರಿದ್ದಾರೆ.
ವರಿಷ್ಠರು ಸಮಯ ನೀಡಿದ ತಕ್ಷಣ ಸಚಿವರ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ಪ್ರಯಾಣ ಬೆಳೆಸಿದರು.
ರಾಜ್ಯ ಸಚಿವ ಸಂಪುಟದಲ್ಲಿ ೭ಸ್ಥಾನಗಳು ಖಾಲಿ ಇವೆ. ವಿಧಾನ ಪರಿಷತ್ ಸದಸ್ಯರಾದ ಎಂ.ಟಿ.ಬಿ ನಾಗರಾಜ್,ಆರ್. ಶಂಕರ್, ಶಾಸಕ ಮುನಿರತ್ನ, ಬಿಜೆಪಿಯ ಹಿರಿಯ ಶಾಸಕರಾದ ಉಮೇಶ್ ಕತ್ತಿ. ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ ಇವರುಗಳಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಮುಖ್ಯಮಂತ್ರಿಗಳ ದೆಹಲಿ ಭೇಟಿ ನಂತರವೇ ಯಾರು ಸಚಿವರಾಗಲಿದ್ದಾರೆ.ಎಷ್ಟು ಮಂದಿಗೆ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂಬುದು ಅಂತಿಮವಾಗಲಿದೆ.