ಸಂಪುಟ ಪುನರ್ರಚನೆಗೆಮಮತಾ ಕಸರತ್ತು

ಕೊಲ್ಕತ್ತಾ,ಆ.೨- ಪಕ್ಷಕ್ಕೆ ಅಗೌರವ ತೋರುವ ಮಂದಿಯನ್ನು ಯಾವುದೇ ಕಾರಣಕ್ಕೂ ಮನ್ನಿಸುವುದಿಲ್ಲ ಅವರು ಎಷ್ಟೇ ದೊಡ್ಡವಾಗಿದ್ದರೂ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಪುಟದ ಹಿರಿಯ ಸಹದ್ಯೋಗಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ನಾಳೆ ಸಚಿವ ಸಂಪುಟ ಪುನರ್ ರಚನೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಇದರಿಂದ ಹಲವು ಸಚಿವರಲ್ಲಿ ತಳಮಳ ಹೆಚ್ಚಾಗಿದೆ. ಮೂಲಗಳ ಪ್ರಕಾರ ೫-೬ ಹೊಸ ಮುಖಗಳಿಗೆ ಮಣೆ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ.
ಪಾರ್ಥ ಭೌಮಿಕ್, ಬಾಬುಲ್ ಸುಪ್ರಿಯೋ, ತಪಸ್ ರೇ ಮತ್ತು ಉದಯನ್ ಗುಹಾ ಅವರ ಹೆಸರುಗಳು ಸಚಿವ ಸ್ಥಾನಕ್ಕೆ ಕೇಳಿ ಬಂದಿವೆ. ಸಂಪುಟ ಪುನಾರಚನೆಗೆ ಒಂದು ದಿನದ ಮುನ್ನ ತೃಣಮೂಲ ಕಾಂಗ್ರೆಸ್‌ನ ಹಲವು ಶಾಸಕರು, ಸಚಿವರಲ್ಲಿ ಭಯ ಆತಂಕದ ವಾತಾವಣಕ್ಕೆ ಕಾರಣವಾಗಿದೆ.
ಸಂಪುಟದಲ್ಲಿ ಹಲವು ಖಾಲಿಯಿರುವ ಸ್ಥಾನ ಭರ್ತಿಯ ಜೊತೆಗೆ ಸಂಪುಟ ಪುನಾರಚನೆ ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹಿರಿಯ ಸಚಿವರಾಗಿದ್ದ ಸುಬ್ರತಾ ದಾ (ಮುಖರ್ಜಿ) ಮತ್ತು ಸಾಧನ್ ಪಾಂಡೆ ನಿಧನರಾಗಿದ್ದಾರೆ, ಮತ್ತು ಪಾರ್ಥ ದಾ (ಚಟರ್ಜಿ) ಜೈಲಿನಲ್ಲಿದ್ದಾರೆ, ಅವರ ಕೆಲಸವನ್ನು ಯಾರು ಮಾಡುತ್ತಾರೆ. ಯಾರಾದರೂ ಅದನ್ನು ಮಾಡಬೇಕಾಗುತ್ತದೆ.ಹೀಗಾಗಿ ಸಂಪುಟ ವಿಸ್ತರಣೆ ಮಾಡುವುದಾಗಿ ತಿಳಿಸಿದ್ದಾರೆ.
ಐದು-ಆರು ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು ಎಂದಿರುವ ಅವರು ಸದ್ಯ ೨೦ ಸಚಿವರನ್ನು ಹೊಂದಿದೆ. , ೧೦ ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು ಮತ್ತು ಒಂಬತ್ತು ಕಿರಿಯ ಮಂತ್ರಿಗಳಿದ್ದಾರೆ.. ನಿಯಮಗಳ ಪ್ರಕಾರ ಬಂಗಾಳ ೪೪ ಮಂತ್ರಿಗಳನ್ನು ಹೊಂದಬಹುದಾಗಿದೆ.