ಸಂಪಾದಕ ಅಹ್ಮದ್ ಹುಸೇನ್ ನಿಧನಕ್ಕೆ ಸಂಪಾದಕರ ಸಂಘ ಸಂತಾಪ

ರಾಯಚೂರು.ಫೆ.೨೮-
ಸ್ವರ್ಣ ಜ್ಯೋತಿ ದಿನ ಪತ್ರಿಕೆಯ ಸಂಪಾದಕ ಅಹ್ಮದ್ ಹುಸೇನ್ ಅವರ ನಿಧನಕ್ಕೆ ಕರ್ನಾಟಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಅಹ್ಮದ್ ಹುಸೇನ್ ಅವರು ಸೋಮವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಭೀಮರಾಯ ಹದ್ದಿನಾಳ, ಜಿಲ್ಲಾ ಅಧ್ಯಕ್ಷ ಪಿ.ಚನ್ನಬಸವ ಬಾಗಲವಾಡ, ಉಪಾಧ್ಯಕ್ಷ ಖಾನಸಾಬ ಮೋಮಿನ್ ಹಾಗೂ ಸಂಘದ ಪದಾಧಿಕಾರಿಗಳು ಇಂದು ಅಹ್ಮದ್ ಅವರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಅಹ್ಮದ್ ಹುಸೇನ್ ಅವರು ಪತ್ರಿಕೆಯ ಸಂಪಾದಕರಾಗಿರುವ ಜೊತೆಗೆ ಸ್ಪೀಡ್ ಕಂಪ್ಯೂಟರ್ಸ್ ಮಾಲೀಕರು ಆಗಿದ್ದರು. ರಾಯಚೂರಿನಲ್ಲಿ ಇರುವ ಸ್ಥಳೀಯ ಪತ್ರಿಕೆಗಳಿಗೆ ಪ್ರಿಂಟರ್ ಗಳನ್ನು ಪೂರೈಸುವ ಮೂಲಕ ಸಂಪಾದಕರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಸದಾ ನಗು ನಗುತ್ತಾ ಇರುವ ಸ್ನೇಹ ಜೀವಿ ಆಗಿದ್ದರು. ಅವರ ಅಕಾಲಿಕ ನಿಧನ ತೀವ್ರ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ದು:ಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಕುಟುಂಬಕ್ಕೆ ಆ ಭಗವಂತ ನೀಡಲಿ ಎಂದು ಸಂಪಾದಕರು ಪ್ರಾರ್ಥಿಸಿದರು.