ಸಂಪಾಜೆ: ದಿ.ಬಾಲಚಂದ್ರ ಕಳಗಿ ಸ್ಮರಣಾರ್ಥ ರಕ್ತದಾನ ಶಿಬಿರ ಹಾಗೂ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ

ಸುಳ್ಯ, ಮಾ.೨೦- ಜಿಲ್ಲಾ ಪಂಚಾಯಿತಿ ಕೊಡಗು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಡಿಕೇರಿ ಕೊಡಗು, ಕೊಡಗು ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಮಡಿಕೇರಿ ಕೊಡಗು, ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆ ಕೊಡಗು, ಗ್ರಾಮ ಪಂಚಾಯಿತಿ ಸಂಪಾಜೆ, ಪೆರಾಜೆ, ಚೆಂಬು, ಮದೆನಾಡು, ಪಯಸ್ವಿನಿ ಸಹಕಾರಿ ಸಂಘ ಸಂಪಾಜೆ ಹಾಗೂ ಲಯನ್ಸ್ ಕ್ಲಬ್ ಸಂಪಾಜೆ, ಶ್ರೀ ಭಗವಾನ್ ಸಂಘ ಚೆಂಬು, ನೆಲ್ಲಿಕುಮೇರಿ ಪ್ರೆಂಡ್ಸ್ ಕ್ಲಬ್ ಕಲ್ಲುಗುಂಡಿ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಬಾಲಚಂದ್ರ ಕಳಗಿ ಅಭಿಮಾನಿ ಬಳಗ ಸಂಪಾಜೆ ಕೊಡಗು ಇವರ ಸಂಯುಕ್ತ ಆಶ್ರಯದಲ್ಲಿ ಬಿಜೆಪಿ ನಾಯಕ ದಿ. ಬಾಲಚಂದ್ರ ಕಳಗಿಯವರ ಸ್ಮರಣಾರ್ಥವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಮಕ್ಕಳ ಆರೋಗ್ಯ ತಪಾಸಣಾ ಶಿಬಿರವು ಸಂಪಾಜೆಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ಸಂಪಾಜೆ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಎಸ್. ದೇವಿಪ್ರಸಾದ್ ಉದ್ಘಾಟಿಸಿದರು. ರಮಾದೇವಿ ಬಾಲಚಂದ್ರ ಕಳಗಿ ಅಧ್ಯಕ್ಷತೆ ವಹಿಸಿದ್ದರು. ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲ ಭರತ್, ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯರಾದ ಕುಷ್ವಂತ್ ಕೋಳಿಬೈಲ್, ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ವಾಸುದೇವ ಕಟ್ಟೆಮನೆ, ಸಂಪಾಜೆ ಗ್ರಾ.ಪಂ. ನಿಕಟಪೂರ್ವಾಧ್ಯಕ್ಷ ಕುಮಾರ್ ಚೆದ್ಕಾರ್, ಪಯಸ್ವಿನಿ ಸಹಕಾರಿ ಸಂಘದ ಅಧ್ಯಕ್ಷ ಅನಂತ್ ಎನ್.ಸಿ, , ಶ್ರೀ ಪಂಚಲಿಂಗೇಶ್ಚರ ದೇವಸ್ಥಾನದ ಅಧ್ಯಕ್ಷ ರಾಜಾರಾಮ್ ಕಳಗಿ, ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಿರ್ಮಲ ಬೇಸಿಲ್ ಅಬ್ರಹಾಂ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಲೀಲಾವತಿ ಕಲಾಯಿ ಪ್ರಾರ್ಥಿಸಿ, ಚಿದಾನಂದ ಹಂಡನ ಸ್ವಾಗತಿಸಿದರು. ಪುರುಷೋತ್ತಮ ಬಾಳೆಹಿತ್ಲು ಕಾರ್ಯಕ್ರಮ ನಿರೂಪಿಸಿದರು.