ಸಂಪಾಜೆ ಗ್ರಾ.ಪಂ.ಕೋವಿಡ್ ಕಾರ್ಯಪಡೆ ಸಭೆ

ಸುಳ್ಯ, ಜೂ.೨-ಸಂಪಾಜೆ ಗ್ರಾ,ಪಂ,ಕೋವಿಡ್ ಕಾರ್ಯಪಡೆ ಸಭೆಯು ಗ್ರಾ,ಪಂ,ಅಧ್ಯಕ್ಷ ಜಿ, ಕೆ,ಹಮೀದ್ ರವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಸಭೆಯಲ್ಲಿ ವಿಶೇಷವಾಗಿ ಆರೋಗ್ಯ ಸಹಾಯಕಿ ಯವರ ನೇಮಕದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯಿತು, ಗ್ರಾಮದಲ್ಲಿ ಕೋವಿಡ್ ಹಾಗೂ ಡೆಂಗ್ಯೂ ಜ್ವರ ವ್ಯಾಪಿಸುತ್ತಿದ್ದು ಆರೋಗ್ಯ ಸಹಾಯಕಿ ಇಲ್ಲದಿರುವ ಬಗ್ಗೆ ಗ್ರಾ.ಪಂ. ಸದಸ್ಯ ಅಬೂಸಾಲಿ ಗಂಭೀರ ಆರೋಪ ಮಾಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರು ಹಾಗೂ ಆರಂತೋಡು ಪ್ರಾ.ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಿಜ್ವಾನ್  ಮೇಲಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.

ಸಭೆಯಲ್ಲಿ ವಿಶೇಷವಾಗಿ ಆಶಾ ಕಾರ್ಯಕರ್ತರಿಗೆ ಆರಂತೋಡಿನಿಂದ ಕೋವಿಡ್ ಬಾದಿತರಿಗೆ ಔಷದಗಳನ್ನು ಉಚಿತವಾಗಿ ತಲುಪಿಸುವ ಗ್ರಾ.ಪಂ.ಸದಸ್ಯರಾದ ಎಸ್.ಕೆ.ಹನೀಫ್ ರವರನ್ನು ಹಾಗೂ ಮೃತದೇಹಗಳ ಅಂತ್ಯಸಂಸ್ಕಾರ ಕೈಗೊಳ್ಳುವ ವಿಖಾಯದ ತಾಜುದ್ದೀನ್ ಟರ್ಲಿ ಯವರಿಗೆ ಹಾಗೂ ಸಂಪಾಜೆ ಗ್ರಾಮದ ಸಾವಿರ ಕುಟುಂಬಗಳಿಗೆ ಸಹಕಾರಿ ಸಂಘದ ಮೂಲಕ ಐದು ಲಕ್ಷ ರೂಪಾಯಿ ವೆಚ್ಚದ ಆಹಾರ ಕಿಟ್ ಗಳನ್ನು ನೀಡುವ ಸಂಪಾಜೆ ಸೊಸೈಟಿಯ, ಅಧ್ಯಕ್ಷರು, ಪದಾಧಿಕಾರಿಗಳು, ಹಾಗೂ ಸಿಬ್ಬಂದಿ ವರ್ಗದವರಿಗೆ ಗ್ರಾ.ಪಂ. ಅಧ್ಯಕ್ಷರು ಅಭಿನಂದನೆಗಳನ್ನು ಸಲ್ಲಿಸಿದರು.

ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸ್ಕ್,ಸೇನಿಟೈಸರ್ ಗ್ಲೋಸ್ ಗಳನ್ನು ನೀಡಲಾಯಿತು.

ಗ್ರಾಮದ ಐದು ವಾರ್ಡ್ ಗಳಲ್ಲಿ ಕೋವಿಡ್ ಹರಡದಂತೆ ವಿಶೇಷ ನಿಗಾ ವಹಿಸಲು ಆಯಾ ವಾರ್ಡ್ ಸದಸ್ಯರ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು.

ಗ್ರಾ,ಕರಣೀಕರಾದ ಮಿಯಾ ಸಾಬ್ ಮುಲ್ಲ,ಗ್ರಾಮದಲ್ಲಿ ಕೋವಿಡ್ ಬಾದಿತರ ಮನೆ ಭೇಟಿ ಹಾಗೂ ಕೋವಿಡ್ ಕೇರ್ ಸೆಂಟರ್ ದಾಖಲಿಸುವ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಪಿಡಿಒ ಸರಿತಾ ಡಿ ಸೋಜ ಉಪಾಧ್ಯಕ್ಷೆ  ಲಿಸ್ಸಿ ಮೊನಾಲಿಸ,ಮಾಜಿ ಗ್ರಾ,ಪಂ,ಅಧ್ಯಕ್ಷರಾದ ಮಹಮ್ಮದ್ ಕುಂಞ ಗೂನಡ್ಕ, ಸುಂದರಿ ಮುಂಡಡ್ಕ,ಜಗದೀಶ್ ರೈ,ಸದಸ್ಯರಾದ ಸವಾದ್ ಗೂನಡ್ಕ,ಸುಮತಿ,ವಿಮಲಾ ಪ್ರಸಾದ್ ಮಾಜಿ ಸದಸ್ಯರಾದ ನಾಗೇಶ್,ತಾಜ್ ಮಹಮ್ಮದ್ ಸಂಪಾಜೆ,ಅಝರುದ್ದೀನ್,ಉಮೇಶ್,ರಝಕ್ ಸೂಪರ್,ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು,ಶಾಲಾ ಅಧ್ಯಾಪಕರು,ಹಾಗೂ ಪಂಚಾ

ಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.