ಸಂಪಾಜೆ ಗ್ರಾಮ ಪಂಚಾಯಿತಿಯಲ್ಲಿ ಕೊವೀಡ್ -೧೯ ಟಾಸ್ಕ್ ಪೋರ್ಸ್ ಸಭೆ

ಸುಳ್ಯ , ಎ.೨೯- ಸಂಪಾಜೆ ಗ್ರಾಮ ಪಂಚಾಯಿತಿಯಲ್ಲಿ ಕೊವೀಡ್ – ೧೯ ಟಾಸ್ಕ್ ಪೋರ್ಸ್ ಸಭೆ ಮಂಗಳವಾರ ನಡೆಯಿತು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಭರತ್, ಉಪಾಧ್ಯಕ್ಷ ಜಗದೀಶ್ ಪರಮಲೆ , ಸದಸ್ಯರಾದ ಕುಮಾರ್ ಚಿದ್ಕಾರ್, ರಮಾದೇವಿ ಬಾಲಚಂದ್ರ,ಬಿ.ಎಂ.ನವೀನ ಕುಮಾರ್, ಸುರೇಶ್ ಪಿ.ಎಲ್,ಆಶಾ ಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ನಿರ್ವಹಣಾ ಅಧಿಕಾರಿ ಮಲ್ಲಿಕಾರ್ಜುನ ಮತ್ತು ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾ ರಾಣಿ ವಂದಿಸಿದರು.