ಸಂಪಾಜೆ ಅಂಚೆಪಾಲಕ ಎಸ್.ಪಿ.ಲೋಕನಾಥ್‌ರವರಿಗೆ ಬೀಳ್ಕೊಡುಗೆ

ಸುಳ್ಯ,ಎ.೨- ಸುಮಾರು ೪೧ ವರ್ಷಗಳ ಕಾಲ ಸಂಪಾಜೆಯ ಗೂನಡ್ಕದಲ್ಲಿ ಅಂಚೆಪಾಲಕರಾಗಿ ಸೇವೆ ಸಲ್ಲಿಸಿ ಮಾ.೩೧ ರಂದು ನಿವೃತ್ತಿಗೊಂಡಿರುವ ಗೂನಡ್ಕ ಶ್ರೀ ಶಾರದಾ ಅನುದಾನಿತ ಶಾಲಾ ಸಂಚಾಲಕರಾಗಿ ಎಸ್.ಪಿ.ಲೋಕನಾಥ್‌ರವರಿಗೆ ವಿದಾಯ ಸಮಾರಂಭವು ಗುರುವಾರ ಗೂನಡ್ಕದ ಶ್ರೀ ಶಾರದಾ ಅನುದಾನಿತ ಶಾಲೆಯಲ್ಲಿ ನಡೆಯಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಜಿ.ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಅರಂತೋಡು ಎನ್ನೆಂಪಿಯು ಕಾಲೇಜಿನ ಸಂಚಾಲಕ ಕೆ.ಆರ್. ಗಂಗಾಧರ್ ಎಸ್.ಪಿ.ಲೋಕನಾಥ್ ಹಾಗೂ ಯಶೋದಾ ಲೋಕನಾಥ್ ದಂಪತಿಗಳನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಗುರುಗಳಾದ ಚಿದಾನಂದ ಯು.ಎಸ್., ಗಣಪತಿ ಭಟ್, ಕೆ.ಪಿ.ಜಗದೀಶ್, ಪಿ.ಎ. ಅಬ್ದುಲ್ಲ, ಯು.ಬಿ.ಚಕ್ರಪಾಣಿ, ದಯಾನಂದ, ವೀಣಾ ಗಣೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರು ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಶಾಲೆಯ ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಹಾಗೂ ಮಕ್ಕಳ ಪೋಷಕರು, ಊರವರು ಉಪಸ್ಥಿತರಿದ್ದರು.