ಸಂಪಲಾಂಭ ದೇವಿ ಉತ್ಸವ ಮೂರ್ತಿ ಮೆರವಣಿಗೆ

ಮಾಲೂರು, ಜು.೨೦: ಪಟ್ಟಣದಲ್ಲಿ ಜನ ಜಾನುವಾರುಗಳಿಗೆ ಯಾವುದೇ ರೋಗ ರುಜೀನಗಳು ಬಾರದಂತೆ ದೇವಿಯನ್ನು ಪ್ರಾರ್ಥಿಸಿ ಪಟ್ಟಣದ ಸಪ್ಪಲಾಂಭದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಸಪ್ಪಲಾಂಭ ದೇವಿಯ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಆಶಾಢ ಮಾಸದಲ್ಲಿ ಪ್ರತಿವರ್ಷದಂತೆ ಈ ವರ್ಷವು ಪಟ್ಟಣದ ಗಾಂಧೀ ವೃತ್ತದಲ್ಲಿರುವ ಸಪ್ಪಲಾಂಭ ದೇವಾಲಯದ ಸಮಿತಿ ಹಾಗೂ ಭಕ್ತಾಧಿಗಳು ದೇವಿಯ ಉತ್ಸವವನ್ನು ಏರ್ಪಡಿಸಿದ್ದು, ಮಂಗಳವಾರ ಬೆಳಗ್ಗೆ ಸಪ್ಪಲಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕಾರ ಮಾಡಿ ಪಲಕ್ಕಿಯಲ್ಲಿ ಕುಳ್ಳರಿಸಿ ಪಟ್ಟಣದಲ್ಲಿ ಜನ ಜಾನುವಾರುಗಳಿಗೆ ಯಾವುದೇ ರೋಗ ರುಜೀನಗಳು ಬಾರದಂತೆ ದೇವಿಯನ್ನು ಪ್ರಾರ್ಥಿಸಿ ಪಟ್ಟಣದ ಮೆರವಣಿಗೆ ನಡೆಸಲಾಯಿತು. ಭಕ್ತಾಧಿಗಳು ದೇವಿಗೆ ಪೂಜೆಯನ್ನು ಸಲ್ಲಿಸಿದರು.