ಸಂಪನ್ಮೂಲ ಬಳಸಿ ಜಿಲ್ಲೆಯನ್ನು ಮೇಲ್ದರ್ಜೇಗೆರಿಸಿ : ಎಸ್ಪಿ ಡಾ. ವೇದಮೂರ್ತಿ

ಶಹಾಪುರ:ನ.30:ಕೃಷ್ಣ ಮತ್ತು ಭೀಮಾ ನದಿಗಳು ಯಾದಗಿರಿ ಜಿಲ್ಲೆಯಲ್ಲಿ ಹರಿಯುತ್ತಿದ್ದು ಶೇ 60% ರಷ್ಟು ನೀರಾವರಿ ಸೇರಿದಂತ ಇತರ ಸಂಪನ್ಮೂಲ ಯಾದಗಿರಿಯಲ್ಲಿದೆ. ಜನಪ್ರತಿನಿಧಿಗಳು ಸರ್ಕಾರದ ಗಮನಕ್ಕೆ ತಂದು ಹೆಚ್ಚಿನ ಅಭಿವೃದ್ದಿ ಕಾರ್ಯಗಳನ್ನು ಮಾಡಿ ಜಿಲ್ಲೆಯನ್ನು ಮೇಲ್ದರ್ಜೇಗೆರಿಬೇಕಿದೆ ಎಂದು ಎಸ್ಪಿ ಡಾ. ವೇದಮೂರ್ತಿ ಹೇಳಿದರು.

ನಗರದ ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ಆವರಣದಲ್ಲಿ ಶ್ರೀ ಚರಬಸವೇಶ್ವರ ಸಂಗೀತ ಸೇವಾ ಸಮಿತಿ ಆಯೋಜಿಸಿದ 24 ನೇ ಸಗರನಾಡು ಸಾಂಸ್ಕøತಿಕ ಉತ್ಸವದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ದೇಶಕ್ಕೆ ಕಾಡುತ್ತಿರುವ ಅಸ್ಪøಶ್ಯತೆಯೆಂಬ ಮಹಾ ಪಿಡುಗು ಜಿಲ್ಲೆಯ ಕೆಲವು ಕಡೆ ಜೀವಂತವಿದೆ. ಅಂತಹ ಆಚರಣೆ ನಿಲ್ಲಸಿ ಎಲ್ಲರು ಸಮಾನರೆಂಬ ಮನೋಭಾವನೆ ಬೆಳೆಸಿ ಭಾರತವನ್ನು ಅಭಿವೃದ್ದಿಯ ಪತದತ್ತ ಸಾಗಿಸಬೇಕಿದೆ. ಮಹಿಳೆಯರ ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳು ಕಂಡು ಬಂದರೆ ಕೂಡಲೆ ನಮ್ಮನ್ನು ಸಂಪರ್ಕಿಸಿ ನಾವು ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳುತ್ತೆವೆ. ಪೋಲಿಸ್ ಇಲಾಖೆ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವೈವಸ್ಥೆ ಕಾಪಾಡಲು ಸಾಕಷ್ಟು ಶ್ರಮಿಸುತ್ತಿದೆ. ಜನತೆ ಪೋಲಿಸರಿಗೆ ಸಹಕಾರಿ ನೀಡಬೇಕಿದೆ ಜನರಿಗೆ ಮನವರಿಕೆ ಮಾಡಿದರು.

ನಂತರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಕನ್ನಡ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ನೇರೆವೆಸುವ, ಜನರಿಗೆ ಮನರಂಜನೆ ನೀಡುವುದರೊಂದಿಗೆ ನಮ್ಮ ಭಾಗದಲ್ಲಿ ಅನೇಕ ಪ್ರತಿಭೆಗಳನ್ನು ಹೋರತರುವ ಇಂತಹ ಅತ್ಯಂತ ಅರ್ಥಪೂರ್ಣ ವೇದಿಕೆ ಸಾಕ್ಷಿಯಾಗಲಿದೆ ಎಂದು ಶ್ಲಾಘಿಸಿದರು.

ಇದೆ ಸಂದರ್ಭದಲ್ಲಿ ಸಗರನಾಡ ಸಿರಿ ಎಂದು ಪುರಸ್ಕಾರವನ್ನು ಡಾ ಸಚಿನ್ ಜಿವಣಗಿ ಕಲಬುರಗಿ, ಡಾ ಮಂಜುನಾಥ ಆರ್ ಶಹಾಪುರ, ಶಿವರಾಜ್ ಬಿ ದೇಶಮುಖ, ಗುರು ಬಂಡಿ ಕಲಬುರಗಿ, ನಟಿ ಅನುಷಾ ರೈ, ಮಂಜುನಾಥ ವಾಹಿನಿ ನಿರೂಪಕರು ಕಲಬುರಗಿ ಇವರಿಗೆ ಸಾನಿದ್ಯ ವಹಿಸಿದ ಪೂಜ್ಯ ಶ್ರೀ ಬಸವಯ್ಯ ಸ್ವಾಮಿಗಳ ಹಾಗೂ ಕಾರ್ಯಕ್ರಮ ಆಯೋಜಿಸಿದ ಸಂಗೀತ ಸೇವಾ ಸಮಿತಿ ಸಂಸ್ಥಾಪಕರಾದ ಡಾ ಶರಣು ಬಿ ಗದ್ದುಗೆ ನೇತೃತ್ವದಲ್ಲಿ ನೀಡಲಾಯಿತು.

ನಗರಸಭೆ ಅದ್ಯಕ್ಷರಾದ ಶ್ರೀ ಮತಿ ಕಮಲಾಬಾಯಿ ಚಂದ್ರಶೇಖರ ಲಿಂಗದಳ್ಳಿ, ಎಪಿಎಂಸಿ ಕಾರ್ಯದರ್ಶಿ ಶಿವಕುಮಾರ ದೇಸಾಯಿ, ಅ ಭಾ ವೀ ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ಮಹೇಶ್ ಅನೆಗುಂದಿ, ಸಿ.ಪಿ.ಐ ಶ್ರೀನಿವಾಸ್ ಅಲ್ಲಾಪುರ, ಡಿಎಸ್ಪಿ ದತ್ತಾತ್ರೇಯ ರಾಯಚೂರು, ಪಿ.ಎಸ್.ಐ ಗಳಾದ ಚಂದ್ರಕಾಂತ ಮಕಾಲೆ, ಅಯ್ಯಪ್ಪ, ಸಂತೋಷ ಇದ್ದರು. ಗದ್ದುಗೆಗೆ ಸೇವೆ ಸಲ್ಲಿಸಿದ ಬಂದಯ್ಯ ಹುಗ್ಗೆಳ್ಳಿ ಮಠ, ಡಾ ಪಾಶಾ ಮಾನವೀಯ ಸಮಿತಿ, ಶ್ರೀಮತಿ ರೇಣುಕಾ ರುದ್ರಣ್ಣ ಚಟ್ರಿಕಿ, ಅ ಭಾ ವೀ ಸಭಾ ರಾಜ್ಯ ಸದಸ್ಯರು ಇವರಿಗೆ ಗೌರವಿಸಲಾಯಿತು. ಅನೇಕ ಕಲಾವಿದರಾದ ಅರುಣ್ ಕಾರ್ನಾಡ್, ಬಾಲು ಆರ್ ಕೆ, ಕವಿತಾ ಗಾಯಕಿ, ಆಂಜನೇಯ ಸೈದಾಪುರ, ಸುನೀಲ್ ಶಿಣಿ, ಉದಯ್, ಕುಮಾರಿ ಆಕಾಂಕ್ಷ ನೃತ್ಯ ತಂಡಗಳು ಕಲೆಗಳ ಪ್ರದರ್ಶನ ಮಾಡಿದರು. ವೆಂಕಟೇಶ ಬೋನೇರ ಸ್ವಾಗತಿಸಿದರು. ಪ್ರದೀಪ್ ಚೌವ್ಹಾನ ವಂದನಾರ್ಪಣೆ ಮಾಡಿದರು, ನಾಗು ಅವಂಟಿ, ಸಂತೋಷ, ಶರಣು, ರೇವಣಸಿದ್ದಯ್, ಭೀಮು ಕಾಂಗ್ರೇಸ್, ಬಸವರಾಜ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡಿತ್ತು. ಸಾವಿರಾರು ಜನ ಪ್ರೇಕ್ಷಕರು ಸೇರಿದ್ದರು.